ಹಾಟ್ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ಗೆ ವರ ಫಿಕ್ಸ್ ಆಯ್ತು ವರ ಯಾರು ಗೊತ್ತಾ?

ಗುರುವಾರ, 3 ಏಪ್ರಿಲ್ 2014 (19:27 IST)
ರಾಜೇಶ್ ಪಾಟೀಲ್

ಬಾಲಿವುಡ್ ಹಾಟ್ ಹಾಟ್ ನಟಿ ಮಲ್ಲಿಕಾ ಶೆರಾವತ್ ಕೊನೆಗೂ ವರನನ್ನು ಹುಡುಕಿಕೊಂಡಿದ್ದಾರೆ. ದಿ ಬ್ಯಾಚುಲೆರೊಟ್ಟೆ ಇಂಡಿಯಾ ಮೇರೆ ಖಯಾಲೋಂಕಿ ಮಲ್ಲಿಕಾ ರಿಯಲ್ಟಿ ಶೋ ಕಾರ್ಯಕ್ರಮದ 30 ಸ್ಪರ್ಧಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ರಿಯಲ್ಟಿ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಜಶನ್ ಸಿಂಗ್ ಎನ್ನುಸ್ಪರ್ಧಾಳು ಫಿಲ್ಮಿರೀತಿಯಲ್ಲಿ ಮದುವೆಯಾಗುವ ಪ್ರಸ್ತಾಪವನ್ನಿಟ್ಟು ಮಲ್ಲಿಕಾಳ ಮನಗೆಲ್ಲುವಲ್ಲಿ ಸಫಲನಾಗಿದ್ದಾನೆ.

ಜಶನ್ ಸಿಂಗ್ ಪ್ರಸ್ತಾಪವನ್ನು ನಗುಮುಖದಿಂದ ಸ್ವೀಕರಿಸಿದ್ದಲ್ಲದೇ ಆತನಿಗೆ ಬಿಗಿಯಾದ ಅಪ್ಪುಗೆ ನೀಡಿ ಸಂತಸ ವ್ಯಕ್ತಪಡಿಸಿದ್ದಾಳೆ. ಇತ್ತೀಚೆಗೆ ಮಲ್ಲಿಕಾ ಮತ್ತೊಬ್ಬ ಸ್ಪರ್ಧಿ ಮಾಡೆಲ್ ಕಂ ನಟ ಕಿರಣ್ ಸಾಗೂ ಕೆನ್ನೆಯ ಮೇಲೆ ಕಿಸ್ ಕೊಟ್ಟು ಅಚ್ಚರಿ ಮೂಡಿಸಿದ್ದಳು.

ಕೊನೆಯ 15 ಮಂದಿ ಸ್ಪರ್ಧಿಗಳಲ್ಲಿ ಜಶನ್ ಸಿಂಗ್ ಮತ್ತು ಕಿರಣ್ ಸಾಗೂ ಮಾತ್ರ ಮಲ್ಲಿಕಾ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೂ ಇಂತೂ ಇಲ್ಲಿಯವರೆಗೆ ಯುವಕರ ನಿದ್ದೆಗೆಡಿಸಿದ್ದ ಮಲ್ಲಿಕಾ ತನ್ನ ಪತಿಯ ತೋಳಲ್ಲಿ ಹಾಯಾಗಿ ನಿದ್ರೆಗೆ ಶರಣಾಗಲಿದ್ದಾಳೆ.

ವೆಬ್ದುನಿಯಾವನ್ನು ಓದಿ