ಹಾಲಿವುಡ್ ನಲ್ಲಿ ಭಾರತಿಯ ನಟರಿಗೆ ಬೆಲೆ ಇಲ್ಲವೆಂದ ಇಮ್ರಾನ್ ಖಾನ್

ಶುಕ್ರವಾರ, 4 ಏಪ್ರಿಲ್ 2014 (09:23 IST)
PR
ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ತನಗೆ ಕಿಂಚಿತ್ತು ಆಸಕ್ತಿ ಇಲ್ಲ ಎನ್ನುವ ಮಾತನ್ನು ಹೇಳಿದ್ದಾರೆ ಬಾಲಿವುಡ್ ನಟ ಇಮ್ರಾನ್ ಖಾನ್. ಅವರು ಈಗಾಗಲೇ ರಿಯ-2 ಅನಿಮೇಶನ್ ಚಿತ್ರಕ್ಕೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ನನಗೆ ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ಒಂದು ಚೂರು ಆಸಕ್ತಿ ಇಲ್ಲ. ಅಲ್ಲಿ ಭಾರತೀಯ ಕಲಾವಿದರಿಗೆ ಉತ್ತಮ ಪಾತ್ರವನ್ನು ನೀಡುವುದೇ ಇಲ್ಲ,ಅಮಿತಾಬ್ ಬಚ್ಚ, ಇರ್ಫಾನ್ ಖಾನ್ ಮತ್ತು ಅನಿಲ್ ಕಪೂರ್ ಅವರು ಅಲ್ಲಿ ಅತಿ ಸಣ್ಣ ಪಾತ್ರಗಳಲ್ಲಿ ನಟಿಸಿ ಬಂದಿದ್ದಾರೆ. ಅದು ಅವರ ವೈಯುಕ್ತಿಕ ಸಂಗತಿ.

ವೆಬ್ದುನಿಯಾವನ್ನು ಓದಿ