ಹುಡುಗರೇ ಸೆಕ್ಸಿ ತಾಪ್ಸಿಯನ್ನ ಯಾರೂ ಲವ್ ಮಾಡ್ತಾ ಇಲ್ಲವಂತೆ !

ಶನಿವಾರ, 5 ಏಪ್ರಿಲ್ 2014 (13:19 IST)
ರನ್ನಿಂಗ್ ಶಾದಿ ಡಾಟ್ ಕಾಂ ಚಿತ್ರದಲ್ಲಿ ನಿಮಿಷ ಬಿಡುವಿಲ್ಲದ ಕೆಲಸದಿಂದ ನಟಿ ತಾಪ್ಸಿಗೆ ಸಿಕ್ಕಾಪಟ್ಟೆ ದಣಿವು ಆಗಿದೆ. ಆಕೆ ಅದರಿಂದ ದೂರವಾಗಲು ಸ್ವಲ್ಪ ಕಾಲ ವಿಶ್ರಾಂತಿ ಬಯಸುತ್ತಿದ್ದಾಳೆ. ತಾಪ್ಸಿಗೆ 45 ದಿನಗಳ ಕಾಲ ಬಿಡುವಿಲ್ಲದಷ್ಟು ಕೆಲಸ.

ಅದರಲ್ಲಿ ಕೇವಲ ಐದು ದಿನಗಳು ಮಾತ್ರ ಆಕೆ ಬ್ರೇಕ್ ತಗೊಂಡಿದ್ದಂತೆ. ಆದರೆ ಆಕೆ ಆಗ ಮುನಿ3 ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದರಂತೆ. ಇವೆಲ್ಲ ಆಕೆಯ ಕೆರಿಯರ್ ಕಥೆ, ಇನ್ನು ತಾಪ್ಸಿ ಲವ್ ಬಗ್ಗೆ ತಿಳಿಯೋಣ.

ಈ ವರೆಗೂ ಯಾರೂ ತಾಪ್ಸಿ ಮನಸ್ಸು ಕದ್ದಿಲ್ಲವಂತೆ .ಮೊದಲು ನಾನು ಈಗಿನಂತೆ ನೋಡುವುದಕ್ಕೆ ಅಷ್ಟೇನೂ ಚಂದ ಇರಲಿಲ್ಲ. ಆದ್ದರಿಂದ ಯಾರು ನನಗೆ ಐ ಲವ್ ಯು ಎಂದು ಹೇಳಲಿಲ್ಲ.

PR
ಈಗ ನಾನು ಅಂದವಾಗಿದ್ದರೂ ಯಾರೂ ನನಗೆ ಐಲವ್ ಯು ಅಂತ ಹೇಳೋಕೆ ಹೋಗಿಲ್ಲ. ಅದಕ್ಕೆ ಕಾರಣ ನಾನೊಬ್ಬ ನಟಿ ಆಗಿರುವುದು. ಬೇರೆ ದಿನಗಳಲ್ಲಿ ಏನೂ ಅನ್ನಿಸದೆ ಹೋದರು ಪ್ರೇಮಿಗಳ ದಿನಗಳಲ್ಲಿ ಮಾತ್ರ ನನಗೆ ಒಬ್ಬ ಸಂಗಾತಿ ಬೇಕು ಎಂದು ಅನ್ನಿಸುತ್ತದೆ.

ಯಾಕೆಂದರೆ ಅಂದು ಪ್ರೇಮಿಗಳು ಒಬ್ಬರನ್ನೊಬ್ಬರು ಅಪ್ಪುತ್ತಾ, ಕಾಣಿಕೆಗಳನ್ನು ನೀಡುತ್ತಾ ಪ್ರಪಂಚದಲ್ಲಿ ಇರೋ ಬಾರೋ ಮಾತುಗಳನ್ನು ಆಡುವ ಬಗ್ಗೆ ಓದುವಾಗ ಅಂತಹ ಲೈಫ್ ತುಂಬಾ ಕಲರ್ ಫುಲ್ ಎಂದು ಅನ್ನಿಸುತ್ತದೆ ಎಂದಿದ್ದಾಳೆ ತಾಪ್ಸಿ!

ವೆಬ್ದುನಿಯಾವನ್ನು ಓದಿ