ನಾನು ಖಜುರಾಹೊ ಶಿಲ್ಪದಂತೆ ಇದ್ದೀನಿ -ವಿದ್ಯಾಬಾಲನ್

ಶನಿವಾರ, 5 ಏಪ್ರಿಲ್ 2014 (14:02 IST)
ತನ್ನನ್ನು ತಾನು ಖಜುರಾಹೊ ಶಿಲ್ಪಿ ಎಂದು ವರ್ಣಿಸಿ ಕೊಂಡಿದ್ದಾಳೆ ಬಾಲಿವುಡ್ ಹಾಟ್ ಬ್ಯೂಟಿ ವಿದ್ಯಾ ಬಾಲನ್. ಆಕೆ ತನ್ನ ಇಮೇಜ್ ನ್ನು ಬದಲಾಯಿಸಿಕೊಂಡ ಬಳಿಕ ಬಾಲಿವುಡ್ ನಲ್ಲಿ ಹೆಚ್ಚಿನ ಗಮನ ಸೇದೆದದ್ದು ಎಲ್ಲರಿಗು ಗೊತ್ತೇ ಇದೆ. ಈಗ ವಿದ್ಯಾ ಬಾಲನ್ ಹೊಸ ಚಿತ್ರ ಶಾದಿ ಕಿ ಸೈಡ್ ಎಫೆಕ್ಟ್ ಬಿಡುಗಡೆಗೆ ಆಯುತ್ತಿದೆ.

ಡರ್ಟಿ ಪಿಕ್ಚರ್ ನಿರ್ಮಿಸಿದ್ದ ಬಾಲಾಜಿ ಮೋಶನ್ ಪಿಕ್ಚರ್ ಈ ಚಿತ್ರವನ್ನು ನಿರ್ಮಿಸಿದೆ. ಈಕೆಗೆ ಜೊತೆಯಾಗಿ ಭಾಗ್ ಮಿಲ್ಕಾ ಭಾಗ್ ಫೇಮ್ ಫರ್ಹಾನ್ ಅಕ್ತರ್ ನಟಿಸಿದ್ದಾರೆ. ಮದುವೆ ಆದ ಬಳಿಕ ಪ್ರೀತಿಗಾಗಿ ಹುಡುಕಾಟ ನಡೆಸುವ ಕಥಾ ಹಂದರ ಹೊಂದಿದೆ ಈ ಚಿತ್ರ. ಇದನ್ನು ಸಾಕೆತ್ ಚೌಧರಿ ನಿರ್ದೇಶಿಸಿದ್ದಾರೆ. ಇದು ಪ್ರಾಯಶಃ ಫೆಬ್ರವರಿ ೨೮ ರಂದು ಬಿಡುಗಡೆ ಆಗುತ್ತದೆ. ಸದ್ಯಕ್ಕೆ ಈ ಚಿತ್ರವನ್ನು ವಿದ್ಯಾಬಾಲನ್ ಪ್ರಮೋಟ್ ಮಾಡುತ್ತಿದ್ದಾಳೆ . ಈ ಪ್ರಮೋಷನ್ ನ ಭಾಗವಾಗಿ ಆಕೆ ತಾನು ಖಜರಾಹೋ ಶಿಲ್ಪದಂತೆ ಇದ್ದೀನಿ ಎಂದು ಸ್ವಯಂ ಗುಣಗಾನ ಮಾಡಿಕೊಂಡಿದ್ದಾಳೆ. ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ತನ್ನ ರೂಪಸಿರಿಯಿಂದ ಎಲ್ಲರ ಗಮನ ಸೆಳೆದಿರುವ ವಿದ್ಯಾ ಮಾತು ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಬಿ ಟೌನ್ ಮಂದಿ..

ವೆಬ್ದುನಿಯಾವನ್ನು ಓದಿ