ನಾಲ್ಕು ನಿಮಿಷಕ್ಕೆ ಒಂದೂವರೆ ಕೋಟಿ ಪಡೆದ ಸನ್ನಿ

ಮಂಗಳವಾರ, 1 ಏಪ್ರಿಲ್ 2014 (13:59 IST)
ಬಾಲಿವುಡ್ ಸಿನಿಮಾ ಇಂಡಸ್ಟ್ರಿ ಅಂದ್ರೆ ಹಣದ ಸುರಿಮಳೆ ಇದ್ದೆ ಇರುತ್ತದೆ. ಅಲ್ಲಿ ನಾಲ್ಕು ನಿಮಿಷಕ್ಕೆ ಒಂದೂವರೆ ಕೋಟಿ ತಗೋತಾರೆ ಸಂಭಾವನೆ ಎಂದರೆ ಯಾರು ಬೇಕಾದರೂ ನಂಬುವಂತಹ ಸಂಗತಿ. ಆದರೆ ಟಾಲಿವುಡ್ ನಲ್ಲಿ ಸಹಿತ ಅಂತಹ ಒಂದು ಸಂಗತಿ ನಡೆದಿದೆ.

ಈ ರೀತಿ ಹಣವನ್ನು ಪಡೆದವರು ಬೇರೆ ಯಾರು ಅಲ್ಲ, ಬಾಲಿವುಡ್ ನ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ . ಆಕೆ ಈಗ ಟಾಲಿವುಡ್ ಚಿತ್ರದಲ್ಲಿ ತನ್ನ ಮೈಮಾಟ ತೋರಲು ಬಂದಿದ್ದಾಳೆ. ಈಗ ರಾಗಿಣಿ ಎಮೆಮೆಸ್ ಚಿತ್ರ ಬಿಡುಗಡೆ ಆಗಿದ್ದು, ಜನರನ್ನು ಸಿಕ್ಕಾಪಟ್ಟೆ ಆಕರ್ಷಿಸಿದೆ.

ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆದ ಆಶಿಕಿ2 ಚಿತ್ರವೂ ಈಗ ಟಾಲಿವುಡ್ ನಲ್ಲಿ ರೀಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಸಚಿನ್ ಜೋಷಿ ಹೀರೋ ಆಗಿದ್ದಾರೆ.
PR

ಇದೆ ಚಿತ್ರದಲ್ಲಿ ಐಟಂ ನಂಬರ್ ನಲ್ಲಿ ಕಾಣಿಸಿಕೊಳ್ಳಲು ಸನ್ನಿ ಲಿಯೋನ್ ಸಮ್ಮತಿ ಸೂಚಿಸಿದ್ದಾರೆ. ಇದಕ್ಕಾಗಿ ಆಕೆ ಪಡೆಯುತ್ತಿರುವ ಒಂದೂವರೆ ಕೋಟಿ ರೂಪಾಯಿಗಳು. ಈ ಚಿತ್ರದಲ್ಲಿ ಐಟಂ ನಂಬರ್ ನಲ್ಲಿ ಕಾಣಿಸಿಕೊಳ್ಳುವಂತೆ ಮನ ಒಲಿಸಿದ್ದು ಸಚಿನ್.

ವೆಬ್ದುನಿಯಾವನ್ನು ಓದಿ