ಬಾಲಯ್ಯನ ಜೊತೆ ಐ ಟಂ ಸಾಂಗ್ ನಲ್ಲಿ ಬಿಪಾಸ ನಟಿಸಲು ಪಡೆದ ಮೊತ್ತ ಎಷ್ಟು ಗೊತ್ತೇ?

ಮಂಗಳವಾರ, 1 ಏಪ್ರಿಲ್ 2014 (14:46 IST)
ನಂದಮೂರಿ ಬಾಲಕೃಷ್ಣ ತನ್ನ ಪಂಚಿಂಗ್ ಡೈಲಾಗ್ಸ್ ಮುಖಾಂತರ ತನ್ನ ಅಭಿಮಾನಿಗಳನ್ನು ಸೆಳೆಯುತ್ತಾರೆ. ಅವರ ಮಾತುಗಳಿಗೆ ಮರುಳಾಗುವ ಅಭಿಮಾನಿಗಳು ಗೆಲುವನ್ನು ನೀಡುತ್ತಾ ಬಂದಿದ್ದಾರೆ. ಬಾಲಯ್ಯನ ಅಭಿಮಾನಿಗಳಿಗೆ ಕೇವಲ ಅವರು ಮಾತ್ರ ಮುಖ್ಯ, ಆ ಚಿತ್ರ ಹೀರೋಯಿನ್ ಬಗ್ಗೆ ಹೆಚ್ಚಿನ ಆಸಕ್ತಿ ತೋರುವುದಿಲ್ಲ.

ಇಂತಹ ಬಾಲಯ್ಯ ಈಗ ಬದಲಾಗುತ್ತಿರುವ ವಾತಾವರಣದ ಅನ್ವಯ ತಾನು ಸಹ ಬಳಗುವ ಹಾದಿಯಲ್ಲಿ ಇದ್ದಾರೆ ಎಂದೇ ಹೇಳ ಬಹುದಾಗಿದೆ. ಅವರ ಲೆಜೆಂಡ್ ಚಿತ್ರಕ್ಕೆಂದು ಆಯ್ಕೆ ಮಾಡಿರುವ ಹೀರೋಯಿನ್ ಇದಕ್ಕೆ ಕಾರಣ. ಆದರೆ ಆ ಹೀರೋಯಿನ್ ಐ ಟಂ ನಂಬರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ .

PR
ಆಕೆ ಬೇರೆ ಯಾರು ಅಲ್ಲ ಬಿಪಾಸ ಬಸು. ಸದ್ಯ ದಲ್ಲಿ ಈ ಹಾಡನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಆದರೆ ಈ ಹಾಡಲ್ಲಿ ತನ್ನ ಮೈ ಮಾಟ ತೋರಲು ಆಕೆ ಸಿಕ್ಕಾಪಟ್ಟೆ ಹಣವನ್ನು ಪಡೆದಿದ್ದಾಳಂತೆ.

ಈ ಹಾಡಲ್ಲಿ ಸಮೀರ ರೆಡ್ಡಿ ನಟಿಸ ಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಮೀರ ಕ್ಕಿಂತ ಬಿಪಾಸ ಸರಿಯಾದ ಆಯ್ಕೆ ಎಂದು ನಿರ್ಧಾರ ಆದ ಕಾರಣ ಆಕೆಗೆ ಅವಕಾಶ ದೊರಕಿತು . ಅದಕ್ಕಾಗಿ ಆಕೆ ಒಂದೂವರೆ ಕೋಟಿ ರೂಪಾಯಿ ಪಡೆದಿದ್ದಾಳಂತೆ ಇಷ್ಟೊಂದು ಮೊತ್ತ ತೆಲುಗು ಸಿನಿ ರಂಗದಲ್ಲಿ ಐ ಟಂ ನಂಬರ್ ಗೆ ಪಡೆದ ಮೊದಲ ನಟಿ ಎನ್ನುವ ಖ್ಯಾತಿ ಸಹ ತನ್ನದಾಗಿಸಿಕೊಂಡಿದ್ದಾಳೆ ಬಿಪ್.

ವೆಬ್ದುನಿಯಾವನ್ನು ಓದಿ