ಮನೆಯವರ ಜೊತೆ ನಟಿಸುವುದು ಅತ್ಯಂತ ಕಷ್ಟದ ಕೆಲಸ ...ಸೋನಂ ಉವಾಚ !

ಬುಧವಾರ, 2 ಏಪ್ರಿಲ್ 2014 (10:05 IST)
PR
ತನ್ನ ಕುಟುಂಬದವರ ಜೊತೆಯಲ್ಲಿ ನಟಿಸುವ ಕೆಲಸ ಅಷ್ಟೊಂದು ಆರಾಮದಾಯಕ ಆಗಿರಲ್ಲ ಎನ್ನುವ ಮಾತನ್ನು ನಟಿ ಸೋನಂ ಕಪೂರ್ ಹೇಳಿದ್ದಾಳೆ. ಆಕೆ ತನ್ನ ತಂದೆ ಅನಿಲ್ ಕಪೂರ್ ಜೊತೆಯಲ್ಲಿ ಐಸ ಚಿತ್ರದಲ್ಲಿ ನಟಿಸಿದ್ದಳು.

ಅದಾದ ಬಳಿಕ ಈಗ ಕೂಬ್ಸೂರತ್ ಅನ್ನುವ ಸಿನಿಮಾದಲ್ಲಿ ತಂಗಿ ರಿಹಾ ಜೊತೆಯಲ್ಲಿ ನಟಿಸುತ್ತಿದ್ದಾಳೆ. ಕುಟುಂಬದ ಸದಸ್ಯರ ಜೊತೆ ನಟನೆ ಮಾಡುವುದು ತುಂಬಾ ಕಷ್ಟ. ಮುಖ್ಯವಾಗಿ ಅವರು ಸಾಕಷ್ಟು ನಿರೀಕ್ಷೆ ಮಾಡುತ್ತಾರೆ. ಅಕಸ್ಮಾತ್ ನಟನೆ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸ ಆದರು ಮನಕ್ಕೆ ಕಿರಿಕಿರಿ ಆಗುತ್ತದೆ.

PR
ಅದೇರೀತಿ ಪ್ರತಿಯೊಂದು ಸಂಗತಿಯು ಕಟ್ಟುನಿಟ್ಟಾಗಿ ಇರಬೇಕು. ಈ ಚಿತ್ರದಲ್ಲಿ ಕಿರಣ್ ಖೇರ್ ಮತ್ತು ರತ್ನ ಪಾಠಕ್ ಇರುವುದರಿಂದ ಸಮಯ ಹೋದದ್ದೇ ತಿಳಿಯಲಿಲ್ಲ ಎನ್ನುವ ಮಾತನ್ನು ಸಹ ಆಕೆ ಈ ಸಮಯದಲ್ಲಿ ಹೇಳಿದ್ದಾಳೆ.

1980ರಲ್ಲಿ ರೇಖಾ ಅವರು ನಟಿಸಿದ್ದ ಖೂಬ್ಸೂರತ್ ಚಿತ್ರದ ರೀಮೇಕ್ ನಲ್ಲಿ ತಾನು ನಟಿಸುತ್ತಿರುವುದಕ್ಕೆ ಹೆಚ್ಚು ಖುಷಿ ಆಗಿದೆ. ನನ್ನ ಕುಟುಂಬದ ಆಪ್ತರಲ್ಲಿ ರೇಖಾ ಸಹ ಒಬ್ಬರು ಎನ್ನುವ ಅಂಶವನ್ನು ಹೇಳಿದ್ದಾಳೆ ಆಕೆ. ಮುಂದೊಂದು ದಿನ ಮಹಿಳೆಯರಲ್ಲಿ ಬದಲಾವಣೆ ತರುವಂತಹ ಚಿತ್ರಗಳಲ್ಲಿ ತಾನು ನಟಿಸುವುದಾಗಿ ಹೇಳಿದ್ದಾಳೆ ಸೋನಂ !

ವೆಬ್ದುನಿಯಾವನ್ನು ಓದಿ