ರಾಖಿ ಸಾವಂತ್ ಮಾಡಿದ ಹೊಲಸು ಕೆಲಸ ಯಾವುದಂದರೆ !

ಶನಿವಾರ, 5 ಏಪ್ರಿಲ್ 2014 (15:36 IST)
ರಾಖಿ ಸಾವಂತ್ ಬಾಲಿವುಡ್ ಟಾಪ್ ಐ ಟಂ ಗರ್ಲ್. ಆಕೆ ಇತ್ತೀಚಿಗೆ ಹೊಲಸು ಕೆಲಸ ಮಾಡಿದ್ದಾಳೆ. ಛೆ ಅಂತಹದ್ದೇನು ಆಕೆ ಮಾಡಿರೋದು ಅಂತ ಚಿಂತೆ ಮಾಡ್ತಾ ಇದ್ದೀರಾ.. ನೀವು ತಿಳಿದಿರುವಂತೆ ಆಕೆ ಹೊಲಸು ಎತ್ತುವ ಕೆಲಸ ಮಾಡಿ ತಾನು ಸಹ ಶುದ್ಧ ರಾಜಕಾರಣಿ ಆಗಲು ಯೋಗ್ಯ ಎಂದು ತೋರಿದ್ದಾಳೆ ಜಾಗಕ್ಕೆ.

ಬಾಯಿ ಬಿಟ್ಟರೆ ಬಣ್ಣ ಗೇಡು. ಯಾಕೆಂದ್ರೆ ಆಕೆ ಎಂದಿಗೂ ತನ್ನ ನಾಲಿಗೆ ಕಂಟ್ರೋಲ್ ನಲ್ಲಿ ಇಟ್ಟು ಕೊಂಡಿಲ್ಲ . ಆ ಮುಖಾಂತರ ಹೆಚ್ಚಿನ ಜನರಿಗೆ ಗೊತ್ತಾಗಿರುವ ರಾಖಿ ಈಗ ಭಾಜಪ ಪಕ್ಷದ ಕಾರ್ಯಕರ್ತೆ. ಆಕೆ ಇತ್ತಿಚೆ ಒಂದಷ್ಟು ಒಳ್ಳೆ ಕೆಲಸಗಳನ್ನು ಮಾಡಲು ಆರಂಭ ಮಾಡಿದ್ದಾಳೆ.

PIB
ರಾಖಿ ವಿಶ್ವ ಮಹಿಳೆಯರ ದಿನದಂದು ಮುಂಬೈ ನಲ್ಲಿ ಕಸ ಎತ್ತುವ ಕೆಲಸದಲ್ಲಿ ನಿರತಳಾಗಿದ್ದಳು. ಅಂದು ಆಕೆ ಮುಂಬೈ ಸ್ಲಂ ಗೆ ಹೋಗಿ ಅಲ್ಲಿ ಸ್ತ್ರೀಯರಿಗೆ, ಮಕ್ಕಳಿಗೆ ಆಹಾರ ಮತ್ತು ಗಿಫ್ಟ್ ನೀಡಿದ್ದಾಳೆ. ಅಲ್ಲದೆ ಯಾವ ರೀತಿ ಕಸದ ಬುಟ್ಟಿಗೆ ಕಸ ಹಾಕ ಬೇಕು ಎನ್ನುವುದರ ಬಗ್ಗೆಯೂ ಸಹ ಆಕೆ ಅವರಿಗೆ ಹೇಳಿದ್ದಾಳೆ. ಈ ರೀತಿ ಸ್ಲಂ ಗಳಲ್ಲಿ ರಾಖಿ ಮಾಡಿದ ಕೆಲಸ ಅಲ್ಲಿನ ಮಂದಿಯನ್ನು ಆಕರ್ಷಿಸಿದೆಯಂತೆ.

ಇದೆಲ್ಲ ರಾಜಕೀಯದಲ್ಲಿ ಬೆಳೆಯುವುದಕ್ಕೆ ಮಾಡುತ್ತಿರುವ ಕೆಲಸವಲ್ಲ . ಒಬ್ಬ ಸಾಮಾನ್ಯ ಪ್ರಜೆಯಾಗಿ ಮಾಡಲು ಹೊರಟಿರುವ ಕೆಲಸ ಎಂದು ಈ ಸಮಯದಲ್ಲಿ ಆಕೆ ಹೇಳಿದ್ದಾಳೆ. ಅನೇಕ ರೋಗಗಳು ಕಸದಿಂದ ಬರುತ್ತದೆ. ಆದ್ದರಿಂದ ತಾನು ಡಸ್ಟ್ ಬಿನ್ ನೀಡಿದ್ದೇನೆ ಎಂದು ಹೇಳಿದ್ದಾಳೆ .. ಹೌದ ರಾಖಿ?

ವೆಬ್ದುನಿಯಾವನ್ನು ಓದಿ