ಸನ್ನಿ ಲಿಯೋನ್ ಆಟೋ ಪ್ರಯಾಣ ಮಾಡ್ತಾರೆ ಸಿಂಗಲ್ಲಾಗಿ .. ಎಲ್ಲಿ ಅಂದ್ರೆ ...!
ಶನಿವಾರ, 5 ಏಪ್ರಿಲ್ 2014 (15:31 IST)
ಬಾಲಿವುಡ್ ಸಿನಿಮಾ ಇಂಡಸ್ಟ್ರಿ ಕೆನಡಿಯನ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಗೆ ಅವಕಾಶಕೊಟ್ಟು ಭಾರತಕ್ಕೆ ಕರೆಯಿಸಿಕೊಂಡಿತು. ಆಕೆ ಈಗ ಭಾರತದ ನಂಬರ್ ಒನ್ ಐ ಟಂ ಗರ್ಲ್. ಈಗ ಸನ್ನಿ ಲಿಯೋನ್ ಪೋರ್ನ್ ಮಾಡೆಲ್ ಎಂದು ಕರೆಯುವಂತೆ ತನ್ನ ಇಮೇಜನ್ನು ಬೆಳಸಿಕೊಳ್ಳದೆ ಐ ಟಂ ಗರ್ಲ್ ಎನ್ನುವ ಅಗ್ಗಳಿಕೆ ಹೊಂದಿದ್ದಾಳೆ.
ತನ್ನ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಚಿತ್ರರಸಿಕರಿಗೆ ಸಿಕ್ಕಾಪಟ್ಟೆ ಇಷ್ಟ ಎನ್ನುವ ಸಂಗತಿ ಸನ್ನಿಗೆ ಗೊತ್ತಿದೆ. ಆದರೆ ಅದನ್ನು ಆಕೆ ಸದಾ ಅನುಮೊದಿಸುವುದಿಲ್ಲ. ತನ್ನ ಹೊಸ ಚಿತ್ರ ರಾಗಿಣಿ ಎಂ ಎಂ ಎಸ್ 2 ಪ್ರಮೋಶನ್ ಗಾಗಿ ಆಕೆ ಆಟೋದಲ್ಲಿ ಒಬ್ಬಳೇ ಪ್ರಯಾಣ ಮಾಡಲು ಸಿದ್ಧ ಆಗಿದ್ದಾಳೆ . ಈಕೆಯ ಹೊಸ ಚಿತ್ರ 21 ಮಾರ್ಚ್ ಬಿಡುಗಡೆ ಆಗಲಿದೆ.
ಇದರ ಭಾಗವಾಗಿ ಆಕೆ ದೆಹಲಿಯ ಆಟೋಗಳ ಮೇಲೆ ರಾಗಿಣಿ ಎಂ ಎಂ ಎಸ್ 2 ಪೋಸ್ಟರ್ ಗಳನ್ನು ಅಂಟಿಸಿದಳು. ಆ ಪೋಸ್ಟರ್ ವಿವಿಧ ರೀತಿಯಲ್ಲಿ ತಯಾರಾಗಿದ್ದು. ಸುಮಾರು 7 ಸಾವಿರ ಆಟೋಗಳಿಗೆ ಈ ಪೋಸ್ಟರ್ ಹಚ್ಚಲಾಯಿತು.
ಆ ಆಟೋ ಚಾಲಕರು ಯಾರ ಆಟೋದಲ್ಲಿ ಸನ್ನಿ ಕೋರ ಬಹುದು ಎನ್ನುವ ಕುತೂಹಲ ಹೊಂದಿದ್ದಾರಂತೆ, ಜೊತೆಗೆ ತಮ್ಮ ಆಟೋದಲ್ಲಿ ಕೂರಲಿ ಎನ್ನುವ ಆಸೆಯು ಅವರಲ್ಲಿ ಇದೆ . ಈಕೆ ನಟಿಸುತ್ತಿರುವ ಈ ಚಿತ್ರಕ್ಕೆ ಈ ಮುಖಾಂತರ ಬೇಕಾದಷ್ಟು ಪಬ್ಲಿಸಿಟಿ ದೊರಕಿದೆ.