ಸನ್ನಿ ಸನ್ನಿ ಸೀರೆ ನೋಡ ಬನ್ನಿ !

ಗುರುವಾರ, 10 ಏಪ್ರಿಲ್ 2014 (18:38 IST)
PR
ಬಾಲಿವುಡ್ ನಲ್ಲಿ ಯಾವುದೇ ರೀತಿಯಲ್ಲೂ ಪ್ರಚಾರಕ್ಕೆ ದುಡ್ಡು ಕಾಸು ಹಾಕದೆ ಬಿಟ್ಟಿ ಪ್ರಚಾರ ಮಾಡಿಕೊಳ್ಳುತ್ತಿರುವ ನಟೀ ಮಣಿಯರಲ್ಲಿ ಸನ್ನಿ ಲಿಯೋನ್ ಹೆಸರು ಈಗ ಮೊದಲಿದೆ. ಆಕೆ ತನ್ನ ಚಿತ್ರ ಎಮೆಮೆಸ್-2 ಎಗಾದಿಗ ಮೈತೋರಿಸಿ ಅಪಾರ ಸಂಖ್ಯೆಯ ಕಲಾ ರಸಿಕರ ಮನ ಗೆದ್ದಿದ್ದಾಳೆ. ಅವಳ ಈ ವೈಖರಿಗೆ ಬೆರಗಾಗಿ ಬಿಟ್ಟಿದೆ ಬಾಲಿವುಡ್.

ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸನ್ನಿ ಲಿಯೋನ್ ಇತ್ತಿಚೆಗೆಸೀರೆ ಉಟ್ಟು, ಜನರ ಮುಂದೆ ಬಂದಳು. ಅವಳ ಆ ರೂಪ ನೋಡಿ ಇಡೀ ಸೀರೆ ಪ್ರಿಯರು ದಂಗಾಗಿ ಹೋದರಂತೆ ಅಷ್ಟೊಂದು ಅಸಹ್ಯಕರವಾಗಿತ್ತಂತೆ.

PR
ಸೀರೆಯನ್ನು ಹೀಗೆಲ್ಲ ಉಡಬಹುದಾ ಎನ್ನುವ ಪ್ರಶ್ನೆ ಮೂಡಿಸುವಲ್ಲಿ ಆಕೆ ಸಫಲ ಆದದ್ದು ಸುಳ್ಳಲ್ಲ ಅಂತಾರೆ ಆಕೆಯನ್ನು ಕಂಡವರು. ಡರ್ಟಿ ಪಿಕ್ಚರ್ ನಲ್ಲಿ ಪರಮ ಡರ್ಟಿ ಯಾಗಿ ಕಂಡ ವಿದ್ಯಾಬಾಲನ್ ಸಹ ದಂಗಾಗಿ ಹೋಗಿದ್ದಾರಂತೆ ಸನ್ನಿ ಎನ್ನುವ ಮಾಯಾಂಗನೆಯ ಸೀರೆಯ ಸೌಂದರ್ಯ ಕಂಡು .

ಗೆಲುವಿಗಾಗಿ ಹೀಗೆಲ್ಲ ಮಾಡ ಬೇಕಾ ಎನ್ನುವುದಕ್ಕಿಂತ ಗೆಲ್ಲುವ ಓಟದಲ್ಲಿ ಹೇಗೆ ಯಶಸ್ವಿ ಆಗ ಬೇಕು ಎನ್ನುವುದನ್ನು ಸನ್ನಿ ನೋಡಿ ಕಲಿಯಿರಿ ಎಂದು ಬಾಲಿವುಡ್ ಮಂದಿ ಹೇಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ