ಸೆಕ್ಸ್ ಸುಖ ನೀಡುವಂತೆ ರೂಪೇಶ್ ಒತ್ತಾಯಿಸಿದ್ದ: ಶೆರ್ಲಿನ್ ಚೋಪ್ರಾ
ಮಂಗಳವಾರ, 1 ಏಪ್ರಿಲ್ 2014 (11:54 IST)
ಬಾಲಿವುಡ್ ಹಾಟ್ ಹಾಟ್ ನಟಿ ಶರ್ಲಿನ್ ಚೋಪ್ರಾ ಮತ್ತು ಕಾಮಸೂತ್ರ 3ಡಿ ನಿರ್ದೇಶಕ ರೂಪೇಶ್ ಪಟೇಲ್ ಮಧ್ಯದ ಸಂಬಂಧ ಹಾಳು ಹಂಪೆಯಂತಾಗಿದ್ದು, ಇದೀಗ ಪೊಲೀಸ್ ಠಾಣೆ ಮೆಟ್ಟಲೇರಿದೆ.
ನಟಿ ಶೆರ್ಲಿನ್ ಚೋಪ್ರಾ ಹೆಚ್ಚುವರಿ ಪೊಲೀಸ್ ಆಯುಕ್ತ ಮತ್ತು ಸಾಂತ್ರಾಕ್ರೂಜ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯ ಬಳಿ ರೂಪೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ನಿರ್ದೇಶಕ ರೂಪೇಶ್ ಸೆಕ್ಸ್ ಸುಖ ನೀಡುವಂತೆ ಒತ್ತಾಯಿಸಿದ್ದ. ಸಿನೆಮಾ ಒಪ್ಪಂದಕ್ಕಾಗಿ ನಕಲಿ ದಾಖಲೆಗಳನ್ನು ಬಳಸಿ ನನಗೆ ನೀಡಬೇಕಾದ ಹಣವನ್ನು ನೀಡದೇ ವಂಚಿಸಿದ್ದಾನೆ ಎಂದು ಶೆರ್ಲಿನ್ ದೂರು ದಾಖಲಿಸಿದ್ದಾಳೆ.
ನಾನು ಸೆಕ್ಸ್ ಸುಖ ನೀಡಲು ಒಪ್ಪದಿದ್ದಾಗ ಸಿನೆಮಾದಲ್ಲಿ ನಟಿಸಲು ಅವಕಾಶ ನೀಡುವುದಿಲ್ಲ. ನನ್ನ ನಗ್ನ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ಬಿಡುಗಡೆಗೊಳಿಸುವುದಾಗಿ ನಿರ್ದೇಶಕ ರೂಪೇಶ್ ಬೆದರಿಕೆಯೊಡ್ಡಿದ್ದಾನೆ. ನನಗೆ ಹಲವಾರು ಬಾರಿ ಅಶ್ಲೀಲ ಎಸ್‌ಎಂಎಸ್ ಸಂದೇಶಗಳು ಮತ್ತು ಇ-ಮೇಲ್‌ಗಳನ್ನು ರವಾನಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಕಾಮಸೂತ್ರಿ 3ಡಿ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿಯೇ ಶೆರ್ಲಿನ್ ಮತ್ತು ರೂಪೇಶ್ ಸಂಬಂಧ ಹದಗೆಟ್ಟಿತ್ತು. ಕೆಲ ದಿನಗಳ ನಂತರ ಕಾಮಸೂತ್ರಿ 3ಡಿ ಚಿತ್ರದ ಶೂಟಿಂಗ್‌ನಿಂದ ಮಧ್ಯದಲ್ಲಿಯೇ ದೂರವಾಗುತ್ತಿರುವುದಾಗಿ ಹೇಳಿಕೆ ನೀಡಿದ್ದರು.ಆದರೆ, ಶೆರ್ಲಿನ್ ನಟನೆಯ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ರೂಪೇಶ್ ಹೇಳಿಕೆ ನೀಡಿದ್ದರು.
ನಂತರ ಶೆರ್ಲಿನ್ ಟ್ವಿಟ್ಟರ್‌ನಲ್ಲಿ ವಾಚಾಮಗೋಚರವಾಗಿ ರೂಪೇಶ್‌ನನ್ನು ನಿಂದಿಸಿದ್ದರು. ಆರೋಪಗಳನ್ನು ನಿರಾಕರಿಸಿದ ರೂಪೇಶ್ ಮೊದಲು ನನ್ನನ್ನು ತಂದೆಯಂತೆ ಕಾಣುತ್ತಿದ್ದಳು ಇದೀಗ ಇಂತಹ ಆರೋಪಗಳನ್ನು ಮಾಡುತ್ತಿದ್ದಾಳೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಇದೀಗ, ಶೆರ್ಲಿನ್ ಮತ್ತು ರೂಪೇಶ್ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.