ಅಮಿರ್ ಖಾನ್ ಸ್ಪೆಷಲ್ ಅಭಿಮಾನಿ ನಿಹಾಲ್ ನಿಧನ

ಮಂಗಳವಾರ, 3 ಮೇ 2016 (14:46 IST)
ಅತಿ ಚಿಕ್ಕ, ಸಾಮಾನ್ಯ ಕನಸು ಹೊಂದಿರುವ ನಿಹಾಲ್ 14 ವರ್ಷದ ಬಾಲಕ.. ಬಾಲಿವುಡ್ ನಟ ಅಮಿರ್ ಖಾನ್ ಅವರ ಬಹುದೊಡ್ಡ ಅಭಿಮಾನಿ.. ಆದ್ರೆ ಆ ಅಭಿಮಾನಿ ಇಂದು ನಿಧನರಾಗಿದ್ದಾರೆ.
ಈ ಬಾಲಕ ಅಕಾಲ ವೃದ್ಧಾಪ್ಯ ಕಾಯಿಲೆಯಿಂದ ಬಳಲುತ್ತಿದ್ದ.. ಇದೊಂದು ಅನುವಂಶೀಯ ಕಾಯಿಲೆಯಾಗಿದ್ದು.. 14 ವರ್ಷದ ನಿಹಾಲ್ ಈ ಕಾಯಿಲೆಯಿಂದ ಬಳಲುತ್ತಿದ್ದ. ಅಂದಹಾಗೆ ಅತಿ ಚಿಕ್ಕ ವಯಸ್ಸಿನಲ್ಲೇ ಆತ ಅಮಿರ್ ಖಾನ್ ಅವರ ಬಹುದೊಡ್ಡ ಅಭಿಮಾನಿಯಾಗಿದ್ದ..

ಈ ಕುರಿತು ನೆನಪು ಮಾಡಿಕೊಂಡ ನಟ ಅಮಿರ್ ಖಾನ್, ಅಂದು ಆತನ ಭೇಟಿಯಾದ ಕ್ಷಣ ಹಾಗೂ ಆತನ ಜತೆಗಿರುವ ಫೋಟೊವನ್ನು ಶೇರ್ ಮಾಡಿದ್ದಾರೆ ಅಮಿರ್,
 
ನಿಹಾಲ್ ಜತೆ ಭೇಟಿ ಮಾಡಿದ್ದು ಖುಷಿ ತಂದಿದೆ.. ಆತ ಗಣೇಶ್‌ನ ಚಿತ್ರವನ್ನು ಡ್ರಾಯಿಂಗ್ ಮಾಡಿದ್ದ. ಅದು ನನ್ನ ಬೆಡ್ ರೂಂನಲ್ಲಿ ಇಡುತ್ತೇನೆ. ಅದನ್ನು ನೋಡಿ ನನಗೆ ನಿತ್ಯವು ಆತನ ನೆನಪು ಬರುತ್ತದೆ. ಆ ಚಿತ್ರದಲ್ಲಿ ಆತನ ಪ್ರೀತಿ ಇದೆ ಎಂದು ಅಂದು ಅಮಿರ್ ಟ್ವಿಟ್ ಮಾಡಿದ್ದರು.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ