ಮೇಘಾಲಯದಲ್ಲಿ ಪತ್ನಿ ಕಿರಣ್ ರಾವ್ ಜನುಮದಿನ ಆಚರಿಸಿಕೊಂಡ ಅಮೀರ್ ಖಾನ್

ಸೋಮವಾರ, 7 ನವೆಂಬರ್ 2016 (12:04 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ತಮ್ಮ ಪತ್ನಿ ಕಿರಣ್ ರಾವ್ ಜನುಮ ದಿನವನ್ನು ಮೇಘಾಲಯದ ಸುಂದರ ತಾಣದಲ್ಲಿ ಆಚರಿಸಿಕೊಂಡಿದ್ದಾರೆ.

ಕುಟುಂಬ ಸಮೇತ ಇಲ್ಲಿನ ಪ್ರವಾಸಿ ತಾಣಕ್ಕೆ ತೆರಳಿರುವವ ಅಮೀರ್ ಟ್ವಿಟರ್ ನಲ್ಲಿ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.  ಪತ್ನಿ ಹಾಗೂ ಪುತ್ರ ಆಝಾದ್ ಖಾನ್ ಜತೆಗೆ ಕೇಕ್ ಮುಂದೆ ಕೂತಿರುವ ಫೋಟೋವನ್ನು ಅವರು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ಕಿರಣ್ ರಾವ್ 43 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಮೀರ್ ಖಾನ್ ತಮ್ಮ ದಂಗಲ್ ಚಿತ್ರದ ಬಿಡುಗಡೆಗೆ ಕಾದಿದ್ದಾರೆ. ಈ ಬಿಡುವಿನ ವೇಳೆಯಲ್ಲಿ ಇಬ್ಬರೂ ಪೂರ್ವದ ರಾಜ್ಯಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅಮೀರ್ ಹಿಮಾಚಲ ಪ್ರದೇಶದಲ್ಲಿ ಪತ್ನಿ ಜತೆಗಿರುವ ಫೋಟೋ ಪ್ರಕಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ