ಹುತಾತ್ಮ ಯೋಧರ ಕುಟುಂಬಕ್ಕೆ ನಟ ಅಕ್ಷಯ್ ಕುಮಾರ್ ಕೊಟ್ಟ ಹಣವೆಷ್ಟು ಗೊತ್ತಾ?!

ಶುಕ್ರವಾರ, 17 ಮಾರ್ಚ್ 2017 (09:52 IST)
ಮುಂಬೈ: ನಟ ಅಕ್ಷಯ್ ಕುಮಾರ್ ಬಾಯಿ ಮಾತಲ್ಲಿ ಮಾತ್ರ ದೇಶಭಕ್ತಿ ಎಂದು ಬೊಗಳೆ ಬಿಡುವುದಿಲ್ಲ. ಸದ್ದಿಲ್ಲದೆ ಮಾಡಿ ತೋರಿಸುತ್ತಾರೆ. ಅದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ.

 

ಸುಕ್ಮಾ ದಾಳಿಯಲ್ಲಿ ಮೃತರಾದ 12 ಯೋಧರ ಕುಟುಂಬಕ್ಕೆ ಅಕ್ಷಯ್ ಕುಮಾರ್  ಧನ ಸಹಾಯ ಮಾಡಿದ್ದಾರೆ. ಅದು ಕಡಿಮೆ ಮೊತ್ತವೇನಲ್ಲ.  ಬರೋಬ್ಬರಿ 9 ಲಕ್ಷ ರೂ. ಪ್ರತೀ ಯೋಧರ ಕುಟುಂಬಕ್ಕೆ 9 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ ಅಕ್ಷಯ್.

 
ಈ ವಿಷಯವನ್ನು ಸ್ವತಃ ಸಿಆರ್ ಪಿಎಫ್ ಟ್ವಿಟರ್ ನಲ್ಲಿ ಪ್ರಕಟಿಸಿದೆ. ಕಳೆದ ಶನಿವಾರ ಛತ್ತೀಸ್ ಘಡದ ಸುಕ್ಮಾ ಎಂಬಲ್ಲಿ ಈ ಯೋಧರು ಮೃತರಾಗಿದ್ದರು. ಆಗಾಗ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಸುದ್ದಿಯಾಗುವ ಅಕ್ಷಯ್ ಕುಮಾರ್ ಈಗ ಮತ್ತೊಮ್ಮೆ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ