ವಿರಾಟ್ ಕೊಹ್ಲಿ ಹೆಸರು ಕೂಗಿದಾಗ ನಾಚಿ ನೀರಾದ ಅನುಷ್ಕಾ ಶರ್ಮಾ

ಮಂಗಳವಾರ, 4 ಸೆಪ್ಟಂಬರ್ 2018 (08:44 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ಮೇಲೆ ಎಷ್ಟೊಂದು ಪ್ರೀತಿಯಿಟ್ಟುಕೊಂಡಿದ್ದಾರೆಂದು ಎಲ್ಲರಿಗೂ ಗೊತ್ತಿರುವಂತದ್ದೇ.

ಅನುಷ್ಕಾ ಎಲ್ಲೇ ಹೋದರೂ ಕೊಹ್ಲಿ ಬಗ್ಗೆ ಆಕೆಯ ಬಳಿ ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಇತ್ತೀಚೆಗೆ ಅನುಷ್ಕಾ ತಮ್ಮ ಲೇಟೆಸ್ಟ್ ಸಿನಿಮಾ ಸೂಯ್ ದಾಗಾ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತ್ರ ಅಭಿಮಾನಿಗಳು ಕೊಹ್ಲಿ ಹೆಸರೆತ್ತಿ ಕೂಗಿದರೆ ನಾಚಿ ನೀರಾದರು.

ವೇದಿಕೆ ಮೇಲೆ ತಮ್ಮ ಚಿತ್ರತಂಡದೊಂದಿಗೆ ನಿಂತು ಚಿತ್ರದ ಬಗ್ಗೆ ಅನುಷ್ಕಾ ಮಾತನಾಡಲು ಹೊರಟಾಗ ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ‘ಕೊಹ್ಲಿ ಕೊಹ್ಲಿ’ ಎಂದು ಕೂಗಿ ಅನುಷ್ಕಾಗೆ ಮಾತನಾಡಲೂ ಬಿಡದೇ ಘೋಷಣೆ ಕೂಗಿದರು. ಇದನ್ನು ನೋಡಿ ನಾಚಿ ನೀರಾದ ಅನುಷ್ಕಾ ‘ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಆದರೆ ಈವತ್ತು ಸೂಯ್ ದಾಗಾ ಬಗ್ಗೆ ಮಾತ್ರ ಮಾತಾಡೋಣ’ ಎಂದು ಕೆನ್ನೆ ಕೆಂಪಗಾಗಿಸಿಕೊಂಡು ನಗುತ್ತಲೇ ಮನವಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ