ವಿಚ್ಛೇದನಕ್ಕೆ ಹೊರಟವರು ಪಾರ್ಟಿಯಲ್ಲಿ ಪ್ರತ್ಯಕ್ಷ!

ಭಾನುವಾರ, 1 ಜನವರಿ 2017 (13:09 IST)
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಈ ಮಾತು ಬಾಲಿವುಡ್‌ನ ಬಹುತೇಕ ಜೋಡಿಗೂ ಅನ್ವಯಿಸುತ್ತದೆ. ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಖಾನ್ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದು ಗೊತ್ತೇ ಇದೆ.
 
ಆದರೆ ಹೊಸ ವರ್ಷದ ಪಾರ್ಟಿಯಲ್ಲಿ ಈ ಜೋಡಿ ಮತ್ತೆ ಒಂದಾಗಿದೆ! ಇವರಿಬ್ಬರ ವರಸೆಯನ್ನು ಅಭಿಮಾನಿಗಳು ಮಿಕಮಿಕ ಎಂದು ನೋಡುವಂತಾಗಿದೆ. ಸ್ನೇಹಿತರೊಂದಿಗೆ ಬೆರೆತು ಗೋವಾದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ ಇವರಿಬ್ಬರು.
 
ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಮಲೈಕಾ ಸಹೋದರಿ ಅಮೃತಾ ಅರೋರಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇವರಿಬ್ಬರೂ ಎಲ್ಲರೊಂದಿಗೆ ಬೆರೆತು ಸಿಕ್ಕಾಪಟ್ಟೆ ಎಂಜಾಯ್ ಮಾಡಿದರು ಎಂದು ಹೇಳಿದ್ದಾರೆ. 2017ನೇ ವರ್ಷ ಜೋಡಿಯನ್ನು ಮತ್ತೆ ಒಂದು ಮಾಡುತ್ತಾ? 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ