ಶಿವರಾಜ ಕುಮಾರ್-ಸುದೀಪ್ ಅಭಿನಯದ ಚಿತ್ರಕ್ಕೆ ಅರ್ಜುನ ಜನ್ಯಾ ಸಂಗೀತ

ಸೋಮವಾರ, 8 ಆಗಸ್ಟ್ 2016 (13:48 IST)
ಮುಂಗಾರು ಮಳೆ -2 ಸಕ್ಸಸ್ ನಿರೀಕ್ಷೆಯಲ್ಲಿರೋ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ ಮುಂಬರುವ ಚಿತ್ರ ಶಿವರಾಜ್ ಕುಮಾರ್ -ಸುದೀಪ್ ಅಭಿನಯದ 'ವಿಲನ್' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ದರ್ಶನ ಅಭಿನಯದ ಚಕ್ರವರ್ತಿ ಚಿತ್ರ ಹಾಗೂ ಹೆಬ್ಬುಲಿ ಚಿತ್ರಕ್ಕೂ ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ನೀಡಿದ್ದಾರೆ. ಇನ್ನೂ ಬಿಗ್ ಪ್ರೊಜೆಕ್ಟ್‌ನಲ್ಲಿ ಮೂಡಿ ಬರುತ್ತಿರುವ 'ವಿಲನ್' ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.  

 
ನಟ, ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಬರುತ್ತಿರುವ ವಿಲನ್ ಚಿತ್ರದಲ್ಲಿ ಶಿವಣ್ಣ ಹಾಗೂ ಸುದೀಪ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅ
 
ಇನ್ನೂ ಅರ್ಜುನ್ ಜನ್ಯಾ 2006ರಲ್ಲಿ ಆಟೋಗ್ರಾಫ್ ಚಿತ್ರ ಜರ್ನಿ ಆರಂಭ ಮಾಡಿದ್ದರು. ಬಿರುಗಾಳಿ, ಸಂಚಾರಿ, ಹಾಗೂ ಕೇಂಪೆಗೌಡ, ವರ್ಧನಾಯಕ್ ಹಾಗೂ ವಿಕ್ಟೋರಿ ಚಿತ್ರಗಳಲ್ಲಿ ಟ್ರ್ಯಾಕ್‌ಗೆ ಸಂಗೀತ ನಿರ್ದೇಶನ ಮಾಡಿದ್ದರು. 
 
ಇದೀಗ ಅವರ ಕೈಯಲ್ಲಿ ಮತ್ತೊಂದು ಸಿನಿಮಾ ವಿಲನ್ ಕೈಗೆತ್ತಿಕೊಳ್ಳಲಾಗಿದ್ದು, ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ದಕ್ಷಿಣ ಭಾರತದ ನಟಿ ತಮನ್ನಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ