ಸೆಂಟ್ರಲ್ ಜೈಲು ಸೇರಿದ ಆರ್ಯನ್ ಖಾನ್

ಶುಕ್ರವಾರ, 8 ಅಕ್ಟೋಬರ್ 2021 (17:32 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಇಂದು ಎನ್ ಸಿಬಿ ಪೊಲೀಸರು ಕೋರ್ಟ್ ಆದೇಶದನ್ವಯ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.


ಅದರಂತೆ ಆರ್ಯನ್ ನನ್ನು ಇಂದು ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು. ಕುಖ್ಯಾತರನ್ನು ಬಂಧಿಸಿದ್ದ ಆರ್ಥರ್ ಜೈಲಿಗೆ ಆರ್ಯನ್ ನನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಗಿದೆ.

ಇನ್ನು, ಆರ್ಯನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಸದ್ಯಕ್ಕೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ