ಪ್ರೆಗ್ನೆನ್ಸಿ ಬಗ್ಗೆ ಪುಸ್ತಕ ಪ್ರಕಟಿಸಿ ಸಂಕಷ್ಟಕ್ಕೀಡಾದ ಕರೀನಾ ಕಪೂರ್

ಗುರುವಾರ, 15 ಜುಲೈ 2021 (11:05 IST)
ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಗರ್ಭಿಣಿಯಾಗಿರುವಾಗ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.


ಈ ಪುಸ್ತಕಕ್ಕೆ ಅವರು ‘ಪ್ರೆಗ್ನೆನ್ಸಿ ಬೈಬಲ್’ ಎಂದು ಟೈಟಲ್ ಇಟ್ಟಿದ್ದರು. ಆದರೆ ಅದುವೇ ಈಗ ಅವರಿಗೆ ಮುಳುವಾಗಿದೆ. ಪುಸ್ತಕದ ಟೈಟಲ್ ನಲ್ಲಿ ಬೈಬಲ್ ಎಂದು ಬರೆದಿರುವುದು ಕ್ರಿಶ್ಚಿಯನ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.

ಈ ಸಂಬಂಧ ಕರೀನಾ ವಿರುದ್ಧ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘ ದೂರು ನೀಡಿದೆ. ಕ್ರಿಶ್ಚಿಯನ್ನರ ಪವಿತ್ರ ಗ್ರಂಥ ಬೈಬಲ್ ಹೆಸರನ್ನು ಪ್ರೆಗ್ನೆನ್ಸಿ ಕುರಿತ ಪುಸ್ತಕಕ್ಕೆ ಇಟ್ಟಿರುವುದಕ್ಕೆ ಮಹಾಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ