ರಣಬೀರ್ -ಕತ್ರೀನಾ ಅಭಿನಯದ 'ಜಗ್ಗಾ ಜಾಸೂಸ್' ಏಪ್ರಿಲ್ 17ಕ್ಕೆ ರಿಲೀಸ್

ಸೋಮವಾರ, 8 ಆಗಸ್ಟ್ 2016 (15:27 IST)
ರಣಬೀರ್-ಕತ್ರೀನಾ ಅಭಿನಯದ  'ಜಗ್ಗಾ ಜಾಸೂಸ್' ಚಿತ್ರ ಏಪ್ರಿಲ್ 7, 2017ಕ್ಕೆ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಬಹಳ ದಿನಗಲಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸರ್‌ಪ್ರೈಜ್ ನೀಡಿದಂತಾಗಿದೆ. ಮಾಜಿ ಪ್ರೇಮಿಗಳಿಬ್ಬರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

 ಚಿತ್ರದ ಸಾಂಗ್‌ನಲ್ಲಿ ಕತ್ರೀನಾ-ರಣಬೀರ್ ಕಾಂಬಿನೇಷನ್ ಸಖತ್ ಆಗಿಯೇ ಮೂಡಿ ಬಂದಿದೆ. ಕತ್ರೀನಾ ಹಾಗೂ ರಣ್‌ಬೀರ್ ಬ್ರೇಕ್ ಅಪ್ ಆದ ಬಳಿಕ ಕೇವಲ ಒಂದೇ ಸ್ಕ್ರೀನ್ ಮೇಲೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
 
 'ಜಗ್ಗಾ ಜಾಸೂಸ್ 'ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಕತ್ರೀನಾ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಉಳಿದಂತೆ ಎಲ್ಲಾ ಸೀನ್‌ಗಳನ್ನು ಬೇರೆ ಬೇರೆಯಾಗಿಯೇ ಚಿತ್ರೀಕರಣ ಮಾಡಲಾಗಿತ್ತು. 
 
' ಜಗ್ಗ ಜಾಸೂಸ್' ಸಿನಿಮಾ ಈಗಾಗಲೇ ಬಾಲಿವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿ ಹಾಕಿದೆ. ಪರಸ್ಪರ ದೂರವಾದ ಬಳಿಕ ಕ್ಯಾಟ್ ಹಾಗೂ ರಣ್ ಬೀರ್ ಕಪೂರ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಸಿನಿಮಾವಾಗಿರೋದ್ರಿಂದ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 
 

ವೆಬ್ದುನಿಯಾವನ್ನು ಓದಿ