ಈಗ ಮಗು ಮಾಡ್ಕೊಂಡ್ರೆ ಅನ್ಯಾಯ ಮಾಡಿದ ಹಾಗಾಗುತ್ತೆ ಎಂದ ದೀಪಿಕಾ ಪಡುಕೋಣೆ

ಶನಿವಾರ, 12 ಅಕ್ಟೋಬರ್ 2019 (10:01 IST)
ಮುಂಬೈ: ರಣವೀರ್ ಸಿಂಗ್ ಮದುವೆಯಾದ ಮೇಲೆ ದೀಪಿಕಾ ಪಡುಕೋಣೆ ಹೋದಲೆಲ್ಲಾ ಗುಡ್ ನ್ಯೂಸ್ ಕೊಡೋದು ಯಾವಾಗ ಎಂಬ ಪ್ರಶ್ನೆ ಬರುತ್ತಲೇ ಇರುತ್ತದೆ.


ಇದಕ್ಕೆ ದೀಪಿಕಾ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ. ತಮಗೆ ಮಗು ಮಾಡಿಕೊಳ್ಳುವ ಯೋಚನೆ ಸದ್ಯಕ್ಕಿಲ್ಲ ಎಂದು ದೀಪಿಕಾ ಸುಳಿವು ನೀಡಿದ್ದಾರೆ.

‘ರಣವೀರ್ ಮತ್ತು ನನಗೆ ಇಬ್ಬರಿಗೂ ಮಗು ಎಂದರೆ ಇಷ್ಟ. ಅದು ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ದಿನ ಆಗೇ ಆಗುತ್ತದೆ. ಆದರೆ ಈಗ ನಾವಿಬ್ಬರೂ ನಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದೇವೆ. ಈಗ ಮಗು ಮಾಡ್ಕೊಂಡ್ರೆ ಅದಕ್ಕೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ