ರಣವೀರ್-ದೀಪಿಕಾ ಪಡುಕೋಣೆ ಬ್ರೇಕಪ್ ನಿಜವೇ?

ಸೋಮವಾರ, 6 ಮಾರ್ಚ್ 2017 (21:14 IST)
ಬಾಲಿವುಡ್‌ನಲ್ಲಿ ಭಗ್ನ ಪ್ರೇಮಿಗಳಿಗೇನು ಕೊರತೆ ಇಲ್ಲ. ಆಗಾಗ ಬ್ರೇಕಪ್, ಪ್ಯಾಕಪ್ ಸುದ್ದಿಗಳು ಮಾಮೂಲಿ. ಆದರೆ ಸುದೀರ್ಘ ಸಮಯದಿಂದ ಪ್ರೀತಿಯಲ್ಲಿ ವಿಹರಿಸುತ್ತಿದ್ದ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಬ್ರೇಕಪ್ ವಿಚಾರ ಈಗ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.
 
ರಾಮ್ ಲೀಲಾ, ಬಾಜಿರಾವ್ ಮಸ್ತಾನಿ ಚಿತ್ರಗಳ ಮೂಲಕ ಇವರಿಬ್ಬರೂ ಯಶಸ್ವಿ ಜೋಡಿ ಎನ್ನಿಸಿಕೊಂಡಿದ್ದರು. ಇವರಿಬ್ಬರ ನಡುವೆ ಪ್ರೀತಿ ಪ್ರೇಮದ ಬೀಜವು ಮೊಳಕೆಯೊಡೆದಿತ್ತು. ಮೂರು ವರ್ಷಗಳಿಂದ ಇವರಿಬ್ಬರ ನಡುವಿನ ಪ್ರೇಮ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿದೆ. ಅದಕ್ಕೆ ದೀಪಿಕಾ ನಡೆತೆಯೇ ಕಾರಣ ಎನ್ನಲಾಗಿದೆ.
 
ತ್ರಿಬಲ್ ಎಕ್ಸ್ ಚಿತ್ರದ ಮೂಲಕ ದೀಪಿಕಾ ಹಾಲಿವುಡ್‍ಗೆ ಜಂಪ್ ಆಗಿದ್ದರು. ಈಗ ಮತ್ತಷ್ಟು ಅವಕಾಶಗಳು ಬರುತ್ತಿರುವ ಕಾರಣ ಅಮೆರಿಕಗೆ ಸ್ಥಳಾಂತರವಾಗಲು ಮುಂದಾಗಿದ್ದಾರಂತೆ. ಹಾಲಿವುಡ್ ಚಿತ್ರಗಳಲ್ಲಿ ಮಿಂಚುತ್ತಿರುವ ಕಾರಣ ರಣವೀರ್‌ರನ್ನು ನಿರ್ಲಕ್ಷಿಸುತ್ತಿದ್ದಾರಂತೆ. ಇವರಿಬ್ಬರ ಸಂಬಂಧ ಹಳಸಲು ಇದೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಅವರಿಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಬ್ರೇಕಪ್ ವಿಚಾರವನ್ನು ಪ್ರಕಟಿಸುವ ಆಲೋಚನೆಯಲ್ಲಿದ್ದಾರಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ