ಬಾಲಿವುಡ್ ನಟಿ ದಿಶಾ ಪಟಾನಿ ತನ್ನ ಜೀವನದ ಅತ್ಯಂತ ಭಯಾನಕ ಸನ್ನಿವೇಶವನ್ನ ತೆರೆದಿಟ್ಟಿದ್ದಾರೆ. ಬ್ರಾಂಡ್ ಶೂಟಿಂಗ್ ಒಂದಕ್ಕೆ ದೆಹಲಿಗೆ ತೆರಳಿದ್ದ ಸಂದರ್ಭ ಹುಚ್ಚು ಅಭಿಮಾನಿಯೊಬ್ಬ ಹಿಂಬಾಲಿಸಿದ್ದನ್ನ ಪಟಾನಿ ಹೇಳಿಕೊಂಡಿದ್ದಾರೆ.
2 ದಿನ ದಿಶಾ ಪಟಾನಿ ಇದ್ದ ಹೋಟೆಲಿಗೆ ಹೋಗಿದ್ದ ಅಭಿಮಾನಿ, ದಿಶಾ ಭೇಟಿಗೆ ಪ್ರಯತ್ನ ನಡೆಸಿದ್ದಾನೆ. ಅದು ಅಷ್ಟಕ್ಕೇ ನಿಂತಿಲ್ಲ. ಶೂಟಿಂಗ್ ಸೆಟ್, ಮಾಲ್, ಥಿಯೇಟರ್ ಎಲ್ಲೆಡೆ ಹಿಂಬಾಲಿಸಿದ್ದಾನೆ. ನಟಿಯ ಭೇಟಿಗೆ ಅವಕಾಶ ನೀಡಿಲಿಲ್ಲವೆಂದು ಹೋಟೆಲ್ ಸಿಬ್ಬಂದಿ ಜೊತೆಯೂ ಆ ವ್ಯಕ್ತಿ ಗಲಾಟೆ ಮಾಡಿಕೊಂಡಿದ್ದಾನೆ.
`ಆ ಪ್ರಹಸನದಿಂದ ನನಗೆ ಬಿಡುಗಡೆ ಸಿಕ್ಕಿದ್ದು, ನಾನೀಗ ನಿರಾಳವಾಗಿದ್ದೇನೆ. ನನ್ನ ಅಭಿಮಾನಿಗಳು ನನ್ನನ್ನ ಅತಿಯಾಗಿ ಇಷ್ಟಪಡುತ್ತಾರೆ. ಅದು ನನ್ನ ಅನುಭವಕ್ಕೆ ಬಂದಾಗಲೆಲ್ಲ ನಾನು ಶಾಕ್`ಗೆ ಒಳಗಾಗುತ್ತೇನೆ. ಅದೊಂದು ಅಹಿತಕರ ಅನುಭವ. ಎಂದಿದ್ದಾರೆ ದಿಶಾ.
ಆದರೆ, ಈ ಬಗ್ಗೆ ದಿಶಾ ಪೊಲೀಸ್ ಠಾಣೆಗೆ ದುರು ನೀಡಿಲ್ಲ. ಅದರ ಬದಲು ಬಾಡಿಗಾರ್ಡ್ ಒಬ್ಬರನ್ನ ನೇಮಿಸಿಕೊಂಡಿದ್ದಾರೆ.