ಕಂಚಿಪುರಂ : ದಕ್ಷಿಣ ಭಾರತದ ಫೇಮಸ್ ನಟಿ ತ್ರಿಶಾ ಅವರು ಸ್ವಚ್ಚ ಭಾರತ ಅಭಿಯಾದ ಮೂಲಕ ಸ್ವತಃ ತಾವೇ ನಿಂತು ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿಕೊಟ್ಟಿರುವ ಕೆಲಸ ಕಂಚಿಪುರಂ ಜಿಲ್ಲೆಯ ನೆಮಾಲಿ ಗ್ರಾಮದಲ್ಲಿ ನಡೆದಿದೆ.
ಇವರು ತೆರೆಮೇಲೆ ನಟಿಸಿ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆಯುವುದರ ಜೊತೆಗೆ ಜನಸೇವೆಯಲ್ಲಿಯೂ ಕೂಡ ಭಾಗಿಯಾಗಿ ಜನರ ಮೆಚ್ಚುಗೆಗೆ ಪ್ರಾತ್ರರಾಗುತ್ತಿದ್ದಾರೆ. ಇವರ ಈ ಕೆಲಸ ಇತರರಿಗೂ ಮಾದರಿಯಾಗುವುದು. ಇವರು ಯುನಿಸೆಫ್ ಜೊತೆ ಸೇರಿಕೊಂಡು ಈ ಕೆಲಸದಲ್ಲಿ ತೊಡಗಿದ್ದು, ಶೌಚಾಲಯ ನಿರ್ಮಾಣಕ್ಕೆಂದು ಇಟ್ಟಿಗೆಗಳನ್ನು ಜೋಡಿಸಿ ಸಿಮೆಂಟ್ ಹಾಕುತ್ತಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಹಾಗೆ ಇವರು ರಕ್ತಹೀನತೆ, ಬಾಲ್ಯವಿವಾಹ, ಬಾಲಕಾರ್ಮಿಕ ಹಾಗು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ಕೆಲಸಕ್ಕೆ ಎಲ್ಲರೂ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ