‘ಸ್ವಿಮ್ಮಿಂಗ್ ಪೂಲ್ ಬಳಿ ನಾವಿಬ್ಬರು ಎಂಜಾಯ್ ಮಾಡಿದ್ದು ನೆನಪಿದೆಯಾ’-ಅಲ್ಲು ಅರ್ಜುನ್ ಸಹೋದರನ ಮೇಲೆ ಶ್ರೀರೆಡ್ಡಿ ಸಿಡಿಸಿದಳು ಮತ್ತೊಂದು ಬಾಂಬ್!

ಮಂಗಳವಾರ, 17 ಜುಲೈ 2018 (07:22 IST)
ಹೈದರಾಬಾದ್ : ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಹೊಸ ಸಂಚಲನ ಮೂಡಿಸಿದ ನಟಿ ಶ್ರೀರೆಡ್ಡಿ ಅವರು ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟ , ನಿರ್ದೇಶಕ, ನಿರ್ಮಾಪಕರ ಮೇಲೆ ಆರೋಪ ಮಾಡಿದ್ದರು. ಇದೀಗ ಮತ್ತೆ ತೆಲುಗು ನಟರೊಬ್ಬರ ಸಹೋದರನ ಮೇಲೆ ಹೊಸ ಬಾಂಬ್ ಸಿಡಿಸಿದ್ದಾರೆ.


ಹೌದು. ನಟಿ ಶ್ರೀರೆಡ್ಡಿ ಇದೀಗ ಆರೋಪ ಮಾಡುತ್ತಿರುವುದು ತೆಲುಗು ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಹೋದರ ಅಲ್ಲು ಬಾಬಿ ವಿರುದ್ಧ. ಅಲ್ಲು ಅರ್ಜುನ್ ಸಹೋದರ ಅಲ್ಲು ಬಾಬಿ ಅವರ ಬಗ್ಗೆ ಸ್ಟೇಟಸ್ ಅಪ್ ಲೋಡ್ ಮಾಡಿರುವ ಶ್ರೀ ರೆಡ್ಡಿ "ನಾನು ಇತ್ತೀಚಿನ ದಿನಗಳಲ್ಲಿ ಪಬ್ ಗೆ ಬರ್ತಿಲ್ಲ ಅಂತ ನೀನು ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದಿಯಾ ಎಂದು ನನಗೆ ಗೊತ್ತು. ನೊವೊಟೆಲ್ ಸ್ವಿಮ್ಮಿಂಗ್ ಪೂಲ್ ಬಳಿ ನಾವಿಬ್ಬರು ಎಂಜಾಯ್ ಮಾಡಿದ್ದು ನೆನಪಿದೆಯಾ" ಎಂದು ನಟಿ ಶ್ರೀ ರೆಡ್ಡಿ ಅಲ್ಲು ಬಾಬಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ