ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮಾತನಾಡಿ ಟ್ರೋಲ್ ಗೆ ಗುರಿಯಾದ ನಿರ್ಮಾಪಕಿ ಏಕ್ತಾ ಕಪೂರ್

ಶನಿವಾರ, 26 ಮೇ 2018 (06:32 IST)
ಮುಂಬೈ : ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಅವರು ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹೇಳಿಕೆ ನೀಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.


ವೀರೆ ದಿ ವೆಡ್ಡಿಂಗ್ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡ ಏಕ್ತಾ ಕಪೂರ್ ಅವರು, ‘ಒಂದು ವೇಳೆ ಪೆಟ್ರೋಲ್ ಬೆಲೆ ಹೆಚ್ಚಾಗಿದ್ದರೂ ಹುಡುಗರು ಹುಡುಗಿಯರನ್ನು ಲಾಂಗ್ ಡ್ರೈವ್‍ ಗೆ ಕರೆದೊಯ್ಯುತ್ತಾರೆ. ಈ ದಿನಗಳಲ್ಲಿ ಹುಡುಗಿಯರು ಸಹ ಹುಡುಗರನ್ನು ಡ್ರೈವ್‌ ಗೆ ಕರೆದೊಯ್ಯುತ್ತಿದ್ದಾರೆ. ಮುಗಿದು ಹೋಗಲು ಇದೇನು ಸಿನಿಮಾ ಅಲ್ಲ. ಆದಕಾರಣ, ನೀವು ಡ್ರೈವಿಂಗ್ ಮೇಲೆ ಕಡಿಮೆ ಖರ್ಚು ಮಾಡಿ. ಥಿಯೇಟರ್‌ ನಲ್ಲಿ ಹೆಚ್ಚು ಸಮಯ ಇರಿ’ ಎಂದು ಹೇಳಿದ್ದಾರೆ.


ಅವರ ಈ ಹೇಳಿಕೆಗೆ ಟ್ವೀಟರ್ ನಲ್ಲಿ ಕೆಲವರು ಟ್ರೋಲ್ ಮಾಡಿದ್ದಾರೆ. ‘ಏಕ್ತಾ ಲಾಜಿಕ್ ಅವರು ನಿರ್ಮಿಸುವ ಧಾರಾವಾಹಿಗಳಂತೆ ಇನ್ನೂ ಬೇಸ್‌ ಮೆಂಟ್‌ ನಲ್ಲೇ ಇದೆ’ ಎಂದು ಒಬ್ಬ ನೇಟಿಜನ್ ಟ್ವೀಟ್ ಮಾಡಿದ್ರೆ, ಇನ್ನೊಬ್ಬ "ಒಂದು ವೇಳೆ ಭವಿಷ್ಯದಲ್ಲಿ ಆಹಾರದ ಬೆಲೆ ಹೆಚ್ಚಾದರೆ, ಅದೇನು ಶಾಲಾ ಶುಲ್ಕ ಅಲ್ಲ ಅಲ್ಲವೇ ಕಟ್ಟದೆ ಇರಲು, ಮಕ್ಕಳ ಶಿಕ್ಷಣಕ್ಕೆ ಕಡಿಮೆ ಖರ್ಚು ಮಾಡಿ. ಆಹಾರಕ್ಕಾಗಿ ಹೆಚ್ಚು ಖರ್ಚು ಮಾಡಬೇಡಿ" ಎಂದು ವ್ಯಂಗ್ಯ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ