ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಸೇರಿ ಐವರ ವಿರುದ್ಧ ಎಫ್`ಐಆರ್ ದಾಖಲು

ಶುಕ್ರವಾರ, 28 ಏಪ್ರಿಲ್ 2017 (15:32 IST)
ಮುಂಬೈನಲ್ಲಿ ನಟಿ ಶಿಲ್ಪಾ ಶೆಟ್ಟಿ, ಆಕೆಯ ಪತಿ ರಾಜ್ ಕುಂದ್ರಾ ಆನ್ ಲೈನ್ ಶಾಪಿಂಗ್ ಟಿ,ವಿ ಶೋ ಬೆಸ್ಟ್ ಡೀಲ್`ನ ಮೂವರು ನಿರ್ದೇಶಕರು ಸೇರಿ ಸೇರಿದಂತೆ ಐವರ ವಿರುದ್ಧ ಎಫ್`ಐಆರ್ ದಾಖಲಾಗಿದೆ. 24 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆಂದು ಜವಳಿ ಉದ್ಯಮಿಯೊಬ್ಬ ಕೇಸ್ ದಾಖಲಿಸಿದ್ದಾನೆ.

ಗೊರೆಗಾಂನ್ ನಿವಾಸಿ ರವಿ ಮೋಹನ್ ಲಾಲ್ ಬಲೋಟಿಯಾ ನಿಡಿರುವ ದೂರಿನ ಪ್ರಕಾರ, 2 ವರ್ಷಗಳ ಹಿಂದೆ ಶಿಲ್ಪಾ, ರಾಜ್ ಕುಂದ್ರಾ ಸೇರಿ ಐವರು ನನ್ನ ಜೊತೆ ಆನ್ ಲೈನ್ ಶಾಂಒಇಂಗ್ ಒಪ್ಪಂದ ಮಾಡಿಕೊಂಡಿದ್ದರು. 2015ರಲ್ಲಿ 1.5 ಕೋಟಿ ರೂ. ಮೌಲ್ಯದ ಬೆಡ್ ಶೀಟ್`ಗಳನ್ನ ನನ್ನ ಬಳಿ ಖರೀದಿಸಿದ್ದರು. ಬೆಡ್ ಶೀಟ್ ಪಡೆದ ಬಳಿಕ1.44 ಕೋಟಿ ಹಣ ಕೊಟ್ಟು, ಇನ್ನುಳಿದ 6 ಲಕ್ಷ ಕೊಡಲು ಸತಾಯಿಸಿದರು. ಅದರ ಜೊತೆಗೆ ಇತ್ತೀಚೆಗೆ 18 ಲಕ್ಷ ಮೌಲ್ಯದ ಬೆಡ್ ಶೀಟ್ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಹಣ ಮಾತ್ರ ಪಾವತಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಥಮಿಕ ತನಿಖೆ ನಡೆಸಿದ ಬಲಿಕ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಕುರಿತು, ಪ್ರತಿಕ್ರಿಯಿಸಿರುವ ರಾಜ್ ಕುಂದ್ರಾ ಅನವಶ್ಯಕವಾಗಿ ದೂರಿನಲ್ಲಿ ನನ್ನ ಪತ್ನಿ ಹೆಸರು ಹೆಸರು ಹೈಪ್ ಪಡೆಯುತ್ತಿದ್ದಾನೆ. ಈತ ಇದೇ ರೀತಿ ಬೇರೆಯವರ ಹೆಸರನ್ನ ದುರ್ಬಳಕೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ