ನವದೆಹಲಿ: ಏ ದಿಲ್ ಹೇ ಮುಷ್ಕಿಲ್ ಚಿತ್ರದ ಬಿಡುಗಡೆಗೆ ಬಂದ ಸಂಕಷ್ಟಗಳನ್ನು ನೋಡಿದ ಮೇಲೆ ಬಾಲಿವುಡ್ ಮಂದಿ ಭಾರೀ ಸೈನಿಕ ಪ್ರೇಮ ಮೆರೆಯುತ್ತಿದ್ದಾರೆ. ಎಲ್ಲರೂ ತಮ್ಮ ಚಿತ್ರಬಿಡುಗಡೆಗೆ ಮೊದಲು ಸೈನಿಕರ ಸ್ಮರಣೆಯಲ್ಲಿ ತೊಡಗಿದ್ದಾರೆ.
ಇದೀಗ ಫೋರ್ಸ್ 2 ಚಿತ್ರ ತಂಡದ ಸರದಿ. ಅಷ್ಟಕ್ಕೂ ಈ ಚಿತ್ರ ತಂಡದವರ ಮೇಲೆ ಯಾರೂ ಕೆಂಡ ಕಾರಿಲ್ಲ. ಆದರೂ ಸ್ವಯಂ ಪ್ರೇರಿತವಾಗಿ ಚಿತ್ರದ ನಾಯಕ ಜಾನ್ ಅಬ್ರಹಾಂ ಮತ್ತು ಸೊನಾಕ್ಷಿ ಸಿನ್ಹಾ ಇಂಡಿಯಾ ಗೇಟ್ ಗೆ ತೆರಳಿ ಸೈನಿಕರಿಗೆ ನಮನ ಸಲ್ಲಿಸಿದ್ದಾರೆ. ವಿಶೇಷವೆಂದರೆ ಇಬ್ಬರೂ ಖಾಕಿ ದಿರಿಸು ತೊಟ್ಟುಕೊಂಡಿದ್ದರು.
ನಂತರ ಮಾತನಾಡಿದ ಸೊನಾಕ್ಷಿ ಇದಕ್ಕಿಂತ ಮೊದಲು ನನಗೆ ಸೈನಿಕರ ತ್ಯಾಗದ ಬಗ್ಗೆ ಗೊತ್ತೇ ಇರಲಿಲ್ಲ. ಈ ಚಿತ್ರ ಮಾಡಿದ ಮೇಲೆ ಸೈನಿಕರ ಬಲಿದಾನ ಏನೆಂದು ಅರ್ಥವಾಯಿತು ಎಂದಿದ್ದಾರೆ. ಫೋರ್ಸ್ 2 ಚಿತ್ರ ಫೋರ್ಸ್ ಚಿತ್ರದ ಮುಂದುವರಿದ ಭಾಗವಾಗಿದೆ. ಇದು ನವಂಬರ್ 18 ರಂದು ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ