ಮೇ 27ಕ್ಕೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ರಿಲೀಸ್

ಶುಕ್ರವಾರ, 6 ಮೇ 2016 (10:46 IST)
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಇದನ್ನು ಕೇಳಿದಾಗ ನಮಗೆ  ತಕ್ಷಣ ನೆನಪಾಗೋದು ಆಕಾಶವಾಣಿ ಪ್ರಸಾರವಾಗುತ್ತಿದ್ದ ಕಾಣೆಯಾದವರ ವರದಿ. ಆದ್ರೆ ಇದೇ ಹೆಸರಲ್ಲಿ ಕನ್ನಡ ಸಿನಿಮಾವೊಂದು ಬರುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಈಗಗಾಲೇ ತನ್ನ ಟ್ರೇಲರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ಈ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ.
ಹೆಸರಿನಂತೆ ಈ ಸಿನಿಮಾ ಕೂಡ ಒಂದು ವಿಭಿನ್ನವಾದ ಸಿನಿಮಾವಾಗಿದೆ. ಕಳೆದು ಹೋದ ತಂದೆಯನ್ನು ಮಗ ಹುಡುಕಾಡೋದೇ ಈ ಸಿನಿಮಾದ ಕಥಾವಸ್ತು. ಇನ್ನು ಸಿನಿಮಾದ ಹಾಡುಗಳಂತೂ ಅದ್ಭುತವಾಗಿ ಮೂಡಿ ಬಂದೆ. ಸಿನಿಮಾದ ಜೀವಾಳವೇ ಹಾಡುಗಳು ಅಂದ್ರೆ ಅತಿಶಯೋಕ್ತಿಯಲ್ಲ.
 
 ಮಗನಿಗಾಗಿ ಹಾತೊರೆಯುವ ತಂದೆ, ವಯಸ್ಸಾದ ತಂದೆಯನ್ನು ನಿರ್ಲಕ್ಷ್ಯದಿಂದ ಕಾಣುವ ಮಗ, ಹೀಗೆ ಬದುಕಿನ ಜಂಜಾಟಗಳನ್ನು ಇಲ್ಲಿ ಹಾಡುಗಳ ಮೂಲಕ ವಿವರಿಸಲಾಗಿದೆ.ಅದರಲ್ಲೂ ಅಲೇ ಮೂಡದೇ ಅನ್ನೋ ಹಾಡು ತುಂಬಾನೇ ಅರ್ಥಪೂರ್ಣವಾಗಿದೆ. 
 
ಈಗಗಾಲೇ ಹಾಡು ಹಾಗೂ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಇದೇ ತಿಂಗಳ 27ರಂದು ರಿಲೀಸ್ ಆಗಲಿದೆ.
 
ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರವನ್ನು ಹೇಮಂತ್ ಎಂ.ರಾವ್ ನಿರ್ದೇಶಿಸಿದ್ದಾರೆ. ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶೃತಿ ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ.ಇನ್ನು ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅನಂತ್ ನಾಗ್ ಅವರು ತಂದೆ ಮಗನಾಗಿ ಅಭಿನಯಿಸಿರೋದು ಸಿನಿಮಾದ ವಿಶೇಷ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ