ರಿಯೊ ಒಲಿಂಪಿಕ್ಸ್ ಆಹ್ವಾನ್ ಬಂದಿಲ್ಲ ಎಂದ ಎ.ಆರ್ ರೆಹಮಾನ್

ಮಂಗಳವಾರ, 10 ಮೇ 2016 (14:09 IST)
ರಿಯೊ ಒಲಿಂಪಿಕ್ಸ್ ರಾಯಭಾರಿಗೆ ಸಂಬಂಧಪಟ್ಟಂತೆ ತಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಹೇಳಿದ್ದಾರೆ. ರಿಯೊ ಒಲಿಂಪಿಕ್ಸ್‌ನ ಗುಡ್‌ವಿಲ್ ಅಂಬಾಸಿಡರ್ ಆಹ್ವಾನ ಬಂದಿಲ್ಲ ಎಂದು ತಿಳಿಸಿದ್ದಾರೆ.
ಚಿತ್ರ ಲಾಂಚ್ ಸಮಾರಂಭದಲ್ಲಿ ಭಾಗಿಯಾಗಿ ಈ ವೇಳೆ ಮಾತನಾಡಿದ ಎ.ಆರ್ ರೆಹಮಾನ್, ಯಾರಾದರೂ ಗುಡ್‌ವಿಲ್ ಅಂಬಾಸಿಡರ್‌‌ಗಾಗಿ ತಮ್ಮನ್ನು ಸಂಪರ್ಕಿಸಲಾಗಿಲ್ಲ ಮಾಧ್ಯಮದವರಿಂದ ನನಗೆ ಗೊತ್ತಾಯ್ತು.. ನನಗೆ ಯಾವುದೇ ಇ-ಮೇಲ್ ಬಂದಿಲ್ಲ ಎಂದು ಅವರು ತಿಳಿಸಿದರು. 
 
ಇನ್ನೂ ಸಲ್ಮಾನ್ ಖಾನ್ ಅಂಬಾಸಿಡರ್ ಆಗಿರುವುದರ ಕುರಿತು ಸಲ್ಮಾನ್ ‌ರನ್ನು ಕೈ ಬಿಡುವಂತೆ ಹಲವರು ಒತ್ತಾಯಿಸಿದ್ದರು. ಅಲ್ಲದೇ ಶೂಟರ್ ಅಭಿನವ ಬಿಂದ್ರಾ ಹಾಗೂ ಸಚಿನ್ ತೆಂಡೂಲ್ಕರ್ ರಿಯೊ ಒಲಿಂಪಿಕ್ಸ್‌ನ ರಾಯಬಾರಿಯಾಗಿ ಆಯ್ಕೆಯಾಗಿದ್ದಾರೆ.

ಸಲ್ಮಾನ್ ಜತೆಗೆ ಕೈ ಜೋಡಿಸಿದ್ದಾರೆ. ಇನ್ನೂ  ಅಗಸ್ಟ್ 5ರಿಂದ ಅಗಸ್ಟ್ 21ರವರೆಗೂ ರಿಯೊ ಒಲಿಂಪಿಕ್ಸ್ ಪಂದ್ಯಗಳು ನಡೆಯಲಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ