ಸಂಜು ಸಿನಿಮಾಕ್ಕೆ ಅನುಮತಿ ನೀಡಿದ್ದಕ್ಕೆ ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಗುರುವಾರ, 12 ಜುಲೈ 2018 (07:34 IST)
ಮುಂಬೈ : ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿರುವ  ‘ಸಂಜು’ ಚಿತ್ರ ಜೂನ್ 29ರಂದು ಬಿಡುಗಡೆಗೊಂಡು ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಬಿಡುಗಡೆಯಾದ ಎರಡು ವಾರದಲ್ಲೇ ಸುಮಾರು 250 ಕೋಟಿ ಗಳಿಸಿ, 2018ರ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಂಡಿದೆ.


ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಸಿನಿಮಾವಾದ ಈ ‘ಸಂಜು’ ಚಿತ್ರವನ್ನು ತೆಗೆಯಲು ಅನುಮತಿ ನೀಡಿರುವ ನಟ ಸಂಜಯ್ ದತ್ ಅವರು ಎಷ್ಟು ಹಣ ಪಡೆದಿರಬಹುದು ಎಂಬ ಕುತೂಹಲ ಹಲವರಲ್ಲಿದೆ. ನಿರ್ದೇಶಕ ರಾಜ್​​​ಕುಮಾರಿ ಹಿರಾನಿ ಸಂಜಯ್ ದತ್ ಅವರ ಜೀವನಾಧಾರಿತ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿ ಸಂಜಯ್ದತ್  ಅವರನ್ನು ಭೇಟಿ ಮಾಡಿದಾಗ ಅವರು ಈ  ಸಿನಿಮಾ ಮಾಡಲು ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರಂತೆ.


ಈ ಚಿತ್ರದಲ್ಲಿ ಅಭಿನಯ ಮಾಡದಿದ್ದರೂ, ತಮ್ಮ ಜೀವನದ ಪ್ರಮುಖ ಘಟನೆಗಳನ್ನು ನಿರ್ದೇಶಕರಿಗೆ ವಿವರಿಸಿ ಸಿನಿಮಾ ತೆಗೆಯಲು ಅನುಮತಿ ನೀಡಿದ್ದಕ್ಕೆ ಸಂಜಯ್ ದತ್ ಸಿನಿಮಾ ನಿರ್ಮಾಪಕರಿಂದ ಬರೊಬ್ಬರಿ 10 ಕೋಟಿ ರೂ. ಪಡೆದಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ