ನಾನು ಸುರಕ್ಷಿತವಾಗಿದ್ದೇನೆ – ಅಭಿಮಾನಿಗಳಿಗೆ ಟ್ವೀಟ್ ಮಾಡಿದ ನಟಿ ದೀಪಿಕಾ

ಗುರುವಾರ, 14 ಜೂನ್ 2018 (14:55 IST)
ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೊಣೆ ಅವರು ವಾಸವಿದ್ದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವೆಂದು ತಿಳಿದುಬಂದರೂ ಕೂಡ ನಟಿ ದೀಪಿಕಾ ಅವರ ಬಗ್ಗೆ ಯಾವುದೇ ಮಾಹಿತಿ ಸಿಗದೆ ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.


ಆದರೆ ಇದೀಗ ನಟಿ ದೀಪಿಕಾ ಅವರು ತಾನು ಸುರಕ್ಷಿತವಾಗಿದ್ದೇನೆಂದು ತಿಳಿಸಿದ್ದು, ಈ ಮೂಲಕ ಅವರ ಅಭಿಮಾನಿಗಳ ಆತಂಕವನ್ನು ಕಡಿಮೆಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ದೀಪಿಕಾ ಅವರು,’ ನಾನು ಸುರಕ್ಷಿತವಾಗಿದ್ದೇನೆ, ಎಲ್ಲರಿಗೂ ಧನ್ಯವಾದಗಳು, ನಮ್ಮ ಅಗ್ನಿಶಾಮಕರಿಗೆ ನಾವು ಪ್ರಾರ್ಥಸೋಣ ಅವರು ತಮ್ಮ ಪ್ರಾಣವನ್ನು ಪಟಣಕಿಟ್ಟು ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ. ಹಾಗೇ ನಟಿ ಮನೆ ಅಥವಾ ಕಚೇರಿಗೆ ಯಾವುದೇ ಹಾನಿಯಾಗಿಲ್ಲ ಎಂಬುದು  ಕೂಡ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ