ರಾಣಾ ಚಿತ್ರದಲ್ಲಿ ಕಿರಿಕ್ ಬೆಡಗಿ ಯಶ್ ಗೆ ನಾಯಕಿ ವಿಚಾರ: ಇದು ಸುಳ್ಳುಸುದ್ದಿ ಎಂದ ರಶ್ಮಿಕಾ

ಶನಿವಾರ, 29 ಜುಲೈ 2017 (18:32 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕ ನಟರಾಗಿ ಅಭಿನಯಿಸುತ್ತಿರುವ ಹರ್ಷ ನಿರ್ದೇಶನದ ರಾಣಾ ಚಿತ್ರಕ್ಕೆ ಕಿರಿಕ್ ಪಾರ್ಟಿ ನಾಯಕಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಈ ಸುದ್ದಿ ಸುಳ್ಳು ಎಂದು ಖುದ್ದು ರಶ್ಮಿಕಾ ಹೇಳಿದ್ದಾರೆ. 
 
ಹರ್ಷ ನಿರ್ದೇಶನದ ಮುಂದಿನ ಚಿತ್ರ'ರಾಣಾ' ದಲ್ಲಿ ಯಶ್ ಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದ್ರೆ ರಶ್ಮಿಕಾ ಬಳಿ ಡೇಟ್ಸ್ ಇಲ್ಲ, ಹಾಗಾಗಿ ಸ್ವಲ್ಪ ಗೊಂದಲವಿದೆ ಎನ್ನುವ ರೂಮರ್ ಎಲ್ಲೆಡೆ ಹರಿದಾಡ್ತಿದೆ.
 
ನಿರ್ದೇಶಕ ಹರ್ಷ ಸದ್ಯ ಪುನೀತ್ ರಶ್ಮಿಕಾ ಜೋಡಿಯ ಅಂಜನೀಪುತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರ ಮುಗಿದ ಬಳಿಕ ರಾಣಾ ಮಾಡಲಿದ್ದಾರೆ.ರಾಣಾಗೆ ಯಶ್ ಹೀರೋ ಎನ್ನುವುದು ನಿಜ. ಆದ್ರೆ ರಶ್ಮಿಕಾಗೆ ನಾಯಕಿಯ ಆಫರ್ ನೀಡಿಲ್ಲ. ನಾಯಕಿ ಯಾರು ಎನ್ನುವುದನ್ನು ಚಿತ್ರತಂಡ ಇನ್ನೂ ನಿರ್ಧರಿಸಿಯೇ ಇಲ್ಲವಂತೆ. ಅಂಜನೀಪುತ್ರದಲ್ಲಿ ರಶ್ಮಿಕಾ ನಟಿಸುತ್ತಿರುವುದರಿಂದ ಹರ್ಷ ಡೈರೆಕ್ಷನ್ ನ ಮುಂದಿನ ಚಿತ್ರದಲ್ಲೂ ಅವರೆ ನಾಯಕಿ ಎಂದು ಹೇಳಲಾಗಿದೆ ಅಷ್ಟೇ. ಜೊತೆಗೆ ಯಶ್ ಮತ್ತು ರಶ್ಮಿಕಾ ಕಿರಿಕ್ ಆಗಿದ್ದರಿಂದ ಡೇಟ್ಸ್ ವಿಚಾರವನ್ನೂ ಸೇರಿಸಿ ಯಾರೋ ಬೇಕೆಂತಲೇ ಈ ಸುದ್ದಿ ಹಬ್ಬಿಸಿದ್ದಾರೆ ಎಂಬುದು ಗಾಂಧಿನಗರದ ಮಾತು.
 

ವೆಬ್ದುನಿಯಾವನ್ನು ಓದಿ