ಹೃದಯಾಘಾತದಿಂದ ಇತ್ತೀಚಿಗಷ್ಟೇ ಅಪಾರ ಅಭಿಮಾನಿಗಳನ್ನಗಲಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಜೆ. ಜಯಲಲಿತಾ ಅವರ ಸಿನಿಮಾ ತೆರೆಯ ಮೇಲೆ ಮೂಡಿಬರಲಿದೆ ಎಂದ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿಯೇ ಥ್ರಿಲ್ ಆಗಿರುವ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ಅಮ್ಮನನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದಾರೆ.
ಮತ್ತೀಗ ಎದುರಾಗಿರೋ ಪ್ರಶ್ನೆ, ಅಮ್ಮನ ಸ್ಥಾನಕ್ಕೆ ಯಾರು ಸೂಕ್ತರು ಎಂಬ ಬಗ್ಗೆ. ಆದರೆ ನಟಿ ಪರಿವರ್ತಿತ ರಾಜಕಾರಣಿ ಜಯಲಲಿತಾ ಅವರು 1999ರಲ್ಲಿ ಬಾಲಿವುಡ್‌ನ ಪ್ರಸಿದ್ಧ ಟಿವಿ ನಿರೂಪಕಿ ಸಿಮಿ ಗರೆವಾಲ್ ಅವರು ನಡೆಸಿದ ಸಂದರ್ಶನದಲ್ಲಿ ಜಯಲಲಿತಾ ತಮ್ಮ ಜೀವನಗಾಥೆ ಸಿನಿಮಾ ಆಗುವುದಾದರೆ. ನನ್ನ ಪಾತ್ರಕ್ಕೆ ಐಶ್ವರ್ಯ ರೈ ಸೂಕ್ತ ಎಂದಿದ್ದರು. "ನನ್ನ ಯೌವ್ವನದ ಪಾತ್ರಕ್ಕೆ ಜೀವ ತುಂಬಲು ಐಶ್ವರ್ಯ ರೈ ಸೂಕ್ತ ಎಂದೆನಿಸುತ್ತದೆ. ಆದರೆ ನನ್ನ ಯೌವ್ವನದ ನಂತರದ ಪಾತ್ರಕ್ಕೆ ಆಯ್ಕೆ ಕಷ್ಟವಾಗಬಹುದು ಎಂದಿದ್ದರು.