ಇನ್ನೂ ಚಿಕ್ಕ ಹುಡುಗಿ ಎಂದು ಪ್ರೇಮ, ಅನುರಾಗ ಇದೆಲ್ಲಾ ಅರ್ಥ ಆಗಲ್ಲ ಎಂದು ನಿರ್ದೇಶಕ ಶ್ರೀಧರ್ ಆ ಚಿತ್ರಕ್ಕೆ ಬೇಡ ಎಂದರಂತೆ. ಆ ಚಿತ್ರದಿಂದ ನನ್ನನು ತೆಗೆದದ್ದು ಯಾಕೆ ಎಂದು ಯೋಚಿಸಿದೆ. ಜಯಲಲಿತಾ ಅವರೊಂದಿಗೆ ನಟಿಸಿದ ಕೆಲ ದಿನಗಳಲ್ಲಿ ಅವರನ್ನು ತುಂಬಾ ಹತ್ತಿರದಿಂದ ಗಮನಿಸಿದೆ. ಆಕೆಯ ಅಂದ, ಆಕರ್ಷಕ ವ್ಯಕ್ತಿತ್ವ ನನ್ನನ್ನು ಸೆಳೆಯಿತು.
ಜಯಲಲಿತಾ ಅವರ ತಾಯಿಯೊಂದಿಗೆ ಶೂಟಿಂಗ್‌ಗೆ ಬರುತ್ತಿದ್ದರು. ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಮೊಟ್ಟಮೊದಲ ಸಲ ಸೆಟ್ಸಲ್ಲಿ ಭೇಟಿಯಾಗಿದ್ದೆ. ನನ್ನ ಮೊದಲ ಚಿತ್ರದ ಮೂಲಕ ಪರಿಚಯವಾದ ಆ ನಟಿ ದೇಶದ ವರ್ಚಸ್ವಿ ನಾಯಕಿಯಾಗಿ ಬದಲಾಗಿದ್ದು, ರಾಜಕೀಯ ನಾಯಕಿ ಅಷ್ಟೇ ಅಲ್ಲದೆ, ಬಡವರ ಹೃದಯದಲ್ಲಿ ನೆಲೆಸಿದ್ದು ನನ್ನನ್ನು ಚಕಿತಗೊಳಿಸಿತ್ತು. ಮಹಿಳೆಯರಿಗೆಲ್ಲಾ ಆಕೆ ಸ್ಫೂರ್ತಿ ಎಂದಿದ್ದಾರೆ ಹೇಮಾ ಮಾಲಿನಿ.