ಶಾಸಕ ಜಿಗ್ನೇಶ್ ಮೇವಾನಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಾರಂತೆ!

ಮಂಗಳವಾರ, 30 ಜನವರಿ 2018 (11:54 IST)
ಅಹಮದಾಬಾದ್: ತಮ್ಮ ಮೊನಚಾದ ಮಾತುಗಳಿಂದ ಸಿಕ್ಕಾಪಟ್ಟೆ ಫೇಮಸ್‌ ಆದ, ದಲಿತ ಮುಖಂಡ, ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಶೀಘ್ರವೇ ತಮಿಳು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೇವಾನಿ ಅವರ ದಲಿತ ಹೋರಾಟದಿಂದ ಪ್ರಭಾವಿತರಾದ ತಮಿಳು ನಿರ್ದೇಶಕ ಪಾ.ರಂಜಿತ್, ಶಾಸಕರನ್ನು ಭೇಟಿ ಮಾಡಿ ಚಿತ್ರದಲ್ಲಿ ಅಭಿನಯಿಸಲು ಕೇಳಿಕೊಂಡಿದ್ದಾರೆ.


ದಲಿತ ಹಕ್ಕುಗಳು ಮತ್ತು ಈಗ ನಡೆಯುತ್ತಿರುವ ಚಳವಳಿಗಳು ಸೇರಿ ಹಲವು ವಿಷಯಗಳ ಬಗ್ಗೆ ಮೇವಾನಿ ಅವರ ಬಳಿ ಚರ್ಚಿಸಿದ್ದೇನೆ. ಅವರ ವ್ಯಕ್ತಿತ್ವಕ್ಕೆ ಸೂಕ್ತ ಪಾತ್ರ ನೀಡಲಾಗುವುದು ಎಂದು ರಂಜಿತ್ ತಿಳಿಸಿದ್ದಾರೆ. ರಜನೀಕಾಂತ್ ಅಭಿನಯದ ಕಬಾಲಿ ಚಿತ್ರವನ್ನು ನಿರ್ಮಿಸಿದ್ದು ರಂಜಿತ್.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ