ಮುಂಬೈ: ಬಾಲಿವುಡ್ ನಲ್ಲಿ ಶುಕ್ರವಾರ ಎರಡು ಬಿಗ್ ಸಿನಿಮಾಗಳು ಬಿಡುಗಡೆಯಾಗಿತ್ತು. ಕರಣ್ ಜೋಹರ್ ಅವರ ಏ ದಿಲ್ ಹೇ ಮುಷ್ಕಿಲ್ ಮತ್ತು ಅಜಯ್ ದೇವಗನ್ ಅವರ ಶಿವಾಯ್.
ಎರಡೂ ಚಿತ್ರಗಳ ಪೈಕಿ ಕರಣ್ ಜೋಹರ್ ಚಿತ್ರ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಗಳಿಕೆ ಮಾಡಿದೆ. ಗಲ್ಲಾ ಪೆಟ್ಟಿಗೆ ಮೂಲಗಳ ಪ್ರಕಾರ ಎರಡೂ ಚಿತ್ರಗಳು ಭರ್ಜರಿಯಾಗಿಯೇ ಓಡುತ್ತಿದೆ. ಆದರೆ ಕರಣ್ ಚಿತ್ರ ಕೊಂಚ ಮುಂದಿದೆ.
ಏ ದಿಲ್ ಹೇ ಚಿತ್ರ ಮೊದಲ ದಿನ 13.30 ಕೋಟಿ ರೂ. ಬಾಚಿಕೊಂಡಿದೆ. ಕರಣ್ ಜೋಹರ್ ಚಿತ್ರ ಮೊದಲ ದಿನವೇ ಇಷ್ಟು ಗಳಿಕೆ ಮಾಡಿದ್ದಕ್ಕೆ ಧರ್ಮ ಪ್ರೊಡಕ್ಷನ್ ಹೌಸ್ ನ ಸಿಇಒ ಅಪೂರ್ವ ಮೆಹ್ತಾ ಖುಷಿ ವ್ಯಕ್ತಪಡಿಸಿದ್ದಾರೆ.
ಅಜಯ್ ದೇವಗನ್ ಚಿತ್ರ ಮೊದಲ ದಿನ 10.24 ಕೋಟಿ ರೂ. ಗಳಿಸಿದೆ. ಶಿವಾಯ್ ಚಿತ್ರಕ್ಕೆ ಜನರ ಪ್ರತಿಕ್ರಿಯೆ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಗಳಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ