ಮಕ್ಕಳನ್ನು ಮಾಡಿಕೊಂಡಲೆಂದೇ ಮದುವೆಯಾದೆ ಎಂದ ಕರೀನಾ ಕಪೂರ್
ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಸೈಫ್ ಕರೀನಾರನ್ನು ಮದುವೆಯಾಗಿದ್ದರು. ಕರೀನಾ ಇದಕ್ಕೆ ಮೊದಲು ಸೈಫ್ ಜೊತೆ ಕೆಲವು ಸಮಯ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. ಇದೀಗ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಮದುವೆ ಬಗ್ಗೆ ಮಾತನಾಡಿರುವ ಕರೀನಾ ಮಕ್ಕಳನ್ನು ಪಡೆಯಬೇಕೆಂದೇ ಮದುವೆಯಾಗಲು ನಿರ್ಧರಿಸಿದೆ. ಅದಿಲ್ಲ ಎಂದಾದರೆ ನೀವು ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರಬಹುದು. ನಾನು, ಸೈಫ್ ಮಕ್ಕಳು ಬೇಕೆನಿಸಿದಾಗ ಮದುವೆ ಎಂಬ ಮುಂದಿನ ಹಂತಕ್ಕೆ ಬರಲು ನಿರ್ಧರಿಸಿದೆವು ಎಂದಿದ್ದಾರೆ.