KL Rahul: ಮಗಳ ಪೋಟೋ ಹಂಚಿ ಹೆಸರು ರಿವೀಲ್ ಮಾಡಿದ ಕೆಎಲ್ ರಾಹುಲ್

Sampriya

ಶುಕ್ರವಾರ, 18 ಏಪ್ರಿಲ್ 2025 (16:25 IST)
Photo Credit X
ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದೆ ಕ್ರಿಕೆಟಿಗ ಕೆಎಲ್‌ ರಾಹುಲ್ ಅವರು ತಮ್ಮ ಮುದ್ದಾದ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ದಂಪತಿ ಈಚೆಗೆ ಹೆಣ್ಣು ಮಗುವನ್ನು ಸ್ವಾಗತಿಸಿದರು.

ಇದೀಗ ಮಗಳಿಗೆ  ಇವಾರಾ ಎಂದು ನಾಮಕರಣ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಮಗುವನ್ನು ಎತ್ತಿಕೊಂಡಿರುವ ಪೋಟೋವನ್ನು ಶೇರ್ ಮಾಡಿ "ನಮ್ಮ ಹೆಣ್ಣು ಮಗು, ನಮ್ಮ ಎಲ್ಲವೂ. ???? Evaarah/ इवारा ~ Gift of God ????"ಎಂದು ಬರೆದುಕೊಂಡಿದ್ದಾರೆ.


ಅಥಿಯಾ-ಕೆಎಲ್ ರಾಹುಲ್ ಅವರ ಪೋಸ್ಟ್‌ಗೆ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.  ಅವರು ಈ ಪೋಸ್ಟ್ ಅನ್ನು ಹಂಚಿಕೊಂಡ ತಕ್ಷಣ, ಹಲವಾರು ಸೆಲೆಬ್ರಿಟಿಗಳು ಮತ್ತು ಅವರ ಅಭಿಮಾನಿಗಳು ಅದಕ್ಕೆ ಕಾಮೆಂಟ್ ಮಾಡಲು ಪ್ರಾರಂಭಿಸಿದರು. ಮಲೈಕಾ
ಅರೋರಾ, ಸಮಂತಾ ರುತ್ ಪ್ರಭು, ಅನುಷ್ಕಾ ಶರ್ಮಾ, ವಾಣಿ ಕಪೂರ್ ಅವರು ಕುಟುಂಬಕ್ಕೆ ಹಾರೈಸಿದ್ದಾರೆ.

ಸದ್ಯ ಕೆಎಲ್‌ ರಾಹುಲ್ ಅವರು ಐಪಿಎಲ್‌ 2025ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಗಮನಸೆಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ