ಲತಾ ಮಂಗೇಶ್ಕರ್ ಗೆ ಐಸಿಯುವಿನಲ್ಲೇ ಮುಂದುವರಿದ ಚಿಕಿತ್ಸೆ
92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಯಸ್ಸಾದ ಕಾರಣಕ್ಕೆ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಸಣ್ಣ ಮಟ್ಟದ ಲಕ್ಷಣಗಳಿವೆ, ಸದ್ಯಕ್ಕೆ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.