ಕರೀನಾ ಕಪೂರ್ ಆದಾಯ ತೆರಿಗೆ ವಿವರಗಳು ಹ್ಯಾಕ್

ಮಂಗಳವಾರ, 3 ಜನವರಿ 2017 (09:31 IST)
ಬಾಲಿವುಡ್ ನಟಿ ಸೈಫ್ ಆಲಿ ಖಾನ್ ಪತ್ನಿ ಕರೀನಾ ಕಪೂರ್ ಆದಾಯ ತೆರಿಗೆ ವಿವರಗಳು ಹ್ಯಾಕ್ ಮಾಡಲು ಪ್ರಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರೆಸೇನಾ ಪಡೆಗೆ ಸೇರಿದ್ದ 26 ವರ್ಷದ ಯುವಕನನ್ನು ಸೈಬಲ್ ಪೊಲೀಸರು ಬಂಧಿಸಿದ್ದಾರೆ.
 
ಕರೀನಾ ಅವರ ಸಿಎ ಕೊಟ್ಟ ವಿವರಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 2016ರಲ್ಲಿ ಕರೀನಾ ಆದಾಯ ತೆರಿಗೆ ಖಾತೆ ಹ್ಯಾಕ್ ಆಗಿತ್ತು. ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ತಾನೇ ಕರೀನಾ ಖಾತೆ ಹ್ಯಾಕ್ ಮಾಡಿದ್ದು, ಆಕೆಯ ಅಭಿಮಾನಿ. ಈ ರೀತಿ ಮಾಡಿದರೆ ಆಕೆಯೊಂದಿಗೆ ಮಾತನಾಡುವ ಅವಕಾಶ ಸಿಗುತ್ತದೆಂದು ಮಾಡಿದ್ದಾಗಿ ಪೊಲೀಸರಿಗೆ ಹೇಳಿದ್ದಾನೆ.
 
ಅಪರಾಧಿಯನ್ನು ಬಂಧಿಸಿರುವ ಪೊಲೀಸರು, ಫೋನ್ ಸಹಾಯದಿಂದ ಕರೀನಾ ಖಾತೆಯನ್ನು ಹ್ಯಾಕ್ ಮಾಡಿದ್ದಾನೆ. ಅವನ ಫೋನ್‌ನಲ್ಲಿ ಸಾಕಷ್ಟು ಐಪಿ ವಿಳಾಸಗಳಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಕೇಂದ್ರ ಸರಕಾರಿ ನೌಕರನಾಗಿರುವ ಆರೋಪಿ ತನ್ನ ಸಹೋದ್ಯೋಗಿಗಳಿಗೆ ಐಟಿ ರಿಟರ್ನ್ಸ್‌ಗೆ ಸಹಾಯ ಮಾಡುತ್ತಿದ್ದ ಎಂದು ಡಿಸಿಪಿ ಸಚಿನ್ ಪಾಟೀಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ