ಲಾಕ್ ಡೌನ್ ಇಫೆಕ್ಟ್: ಸಾಲಕಟ್ಟಲಾಗದೇ ಒದ್ದಾಡುತ್ತಿರುವ ಮಧ್ಯಮವರ್ಗ

ಗುರುವಾರ, 16 ಜುಲೈ 2020 (09:05 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ಸರ್ಕಾರ ಮಾಡಿರುವ ಲಾಕ್ ಡೌನ್ ತಂತ್ರ ಹೆಚ್ಚಾಗಿ ಹೊರೆಯಾಗಿರುವುದು ಮಧ್ಯಮ ವರ್ಗಕ್ಕೆ. ತಿಂಗಳ ಸಂಬಳ ನೆಚ್ಚಿ ಸಾಲ-ಸೋಲ ಮಾಡಿ ಮನೆ, ವಾಹನ ಖರೀದಿ ಮಾಡಿರುವವರು ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.


ಯಾಕೆಂದರೆ ಲಾಕ್ ಡೌನ್ ನಿಂದಾಗಿ ನಷ್ಟವಾಗಿದೆ ಎಂಬ ನೆಪದಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅರ್ಧ ಸಂಬಳ ಇಲ್ಲವೇ ಒಂದಷ್ಟು ಶೇಕಡಾ ವೇತನ ಕಡಿತ ಮಾಡಿದೆ. ಇದರಿಂದಾಗಿ ನಿತ್ಯದ ಜೀವನ ನಡೆಸುವ ಜತೆಗೆ ಸಾಲ ಕಟ್ಟುವ ಚಿಂತೆ ಮಧ್ಯಮ ವರ್ಗಕ್ಕೆ ಕಾಡುತ್ತಿದೆ.

ಇದೀಗ ಮತ್ತೆ ಬೆಂಗಳೂರು ಲಾಕ್ ಡೌನ್ ಆಗಿರುವುದರಿಂದ ಮತ್ತಷ್ಟು ಕಂಪನಿಗಳು ನಷ್ಟ ಅನುಭವಿಸಲಿವೆ. ಈ ಹೊರೆ ನೇರವಾಗಿ ನೌಕರರ ಮೇಲೆ ಬೀಳುತ್ತಿದೆ. ಇದರಿಂದಾಗಿ ಲಾಕ್ ಡೌನ್ ಕೊರೋನಾ ನಿಯಂತ್ರಿಸುವುದಕ್ಕಿಂತ ಎಷ್ಟೋ ಜನರು ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಕಹಿಸತ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ