ಸೆಲೆಬ್ರಿಟಿ-ಜಾಹೀರಾತು ಕುರಿತು ಇಂದು ಚರ್ಚೆ

ಮಂಗಳವಾರ, 30 ಆಗಸ್ಟ್ 2016 (16:03 IST)
ಜಾಹೀರಾತಿನ ಮೂಲಕ ದಾರಿ ತಪ್ಪಿಸುತ್ತಿರುವ ಸೆಲೆಬ್ರಿಟಿಗಳಿಗೆ ಐದು ವರ್ಷ ಜೈಲು ಶಿಕ್ಷೆ ಯಾಗುವುದರ ಕುರಿತು ವಿಧೇಯಕ ಸಂಬಂಧ ಇವತ್ತು ಚರ್ಚೆ ನಡೆಯಲಿದೆ. ಒಂದು ವೇಳೆ ಮಸೂದೆ ಪ್ರಕಾರ 50 ಲಕ್ಷ ರೂ, ಹಾಗೂ ಐದು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.  
    
ಮೂಲಗಳ ಪ್ರಕಾರ, ವಿತ್ತ ಸಚಿವ ಅರುಣ್ ಜೇಟ್ಲಿ ಇವತ್ತು ಮೀಟಿಂಗ್ ನಡೆಸಲಿದ್ದಾರೆ. ವಿಧೇಯಕ ಮಂಜುರಾತಿ ಕುರಿತಂತೆ ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪ ಕುರಿತು ಚಿಂತಿಸಲಾಗುತ್ತಿದೆ. 

ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಬ್ರ್ಯಾಂಡ್ ಅಂಬಾಸಿಡರ್ ಹಾಗೂ ತಪ್ಪು ಮಾಹಿತಿ ನೀಡುವ ಸಂಸ್ಥೆಗಳು ಹಾಗೂ ರಾಯಭಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. 
 
ಫೇರ್ ಆಂಡ್ ಲವ್ಲಿ ಹಚ್ಚಿಕೊಂಡರೆ ಕೇವಲ ಐದೇ ದಿನದಲ್ಲಿ ಸೌಂದರ್ಯ ಕಾಣಬಹುದು ಎಂದು ಜಾಹೀರಾತಿನಲ್ಲಿ ಮಿಂಚಿರುವ ಯಾಮಿ ಗೌತಮಿ, ಇನ್ನೂ ಲಕ್ಸ್ ಸೋಪ್ ಸುಂದರ ಮೈಮಾಟಕ್ಕಾಗಿ ಬಳಸಿ ಎನ್ನುವ ಕರೀನಾ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರಂತೆ.
 
ಇನ್ನೂ ನಟಿಯರೂ ಹೇಳಿದಂತೆ ನಡೆಯದೇ ಇದ್ರೆ ಗ್ರಾಹಕರು ದೂರು ಸಲ್ಲಿಸಬಹುದು.. ಗ್ರಾಹಕರು ಹೇಳಿದ್ದು ಸತ್ಯ ಎಂದು ಸಾಬೀತಾದರೆ, ತಪ್ಪು ಮಾಹಿತಿ ನೀಡಿದ ಸಂಸ್ಥೆಗೆ ಹಾಗೂ ರಾಯಭಾರಿ ಕಛೇರಿಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಲ್ಲದೇ 50 ಲಕ್ಷ ಸಹ ದಂಡ ವಿಧಿಸಲಿದೆ. ಸಂಸದೀಯ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸಿಗೆ ಸರ್ಕಾರ ಒಪ್ಪಿಗೆ ನೀಡಿದೆ. 
 
ಹೆಚ್ಚಿನ ಗ್ರಾಹಕರು ತಮ್ಮ ನೆಚ್ಚಿನ ನಟಿಯರು ಜಾಹೀರಾತು ಮಾಡುತ್ತಿದ್ದಾರೆ ಎಂದು ನಂಬಿ ಖರೀದಿ ಮಾಡುವ ಜನರಿದ್ದಾರೆ. ಸೆಲೆಬ್ರಿಟಿಗಳು ಹೇಳಿದಂತೆ ವಸ್ತುಗಳನ್ನು ಬಳಕೆ ಮಾಡಿದಾಗ ಅದು ನಡೆಯದೇ ಹೋದ್ರೆ ಗ್ರಾಹಕರು ದೂರು ಸಲ್ಲಿಸಬಹುದು. 
 
ಈ ಬಗ್ಗೆ ಆಹಾರ, ಗ್ರಾಪಕ ವ್ಯವಹಾರಗಳ ಮತ್ತು ಸಾರ್ವಜನಿಕ ವಿತರಣೆಗಾಗಿ ಸಂಸತ್‌ನ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಸಿ ದಿವಾಕರ್ ರೆಡ್ಡಿ ನೇತೃತ್ವದ ಸಮಿತಿ ಕಳೆದ ಏಪ್ರಿಲ್ ತಿಂಗಳಲ್ಲಿ ಈ ವರದಿ ಸಲ್ಲಿಸಿತ್ತು.
 
ಹೊಸ ಮಸೂದೆ ಅವ್ನಯ 75ಬಿ ಉಲ್ಲೇಖಿಸಲಾದ ಜಾಹೀರಾತು ನೀಡಿರುವ ಮಾಹಿತಿ ತಪ್ಪು ಅಥವಾ ದಾರಿ ತಪ್ಪಿಸುವಂತಿದ್ದರೆ ಅದು ಗ್ರಾಹಕರ ಹಿತದೃಷ್ಟಿಯಿಂದ ಸರಿಯಲ್ಲ, ಇದು ಶಿಕ್ಷಾರ್ಹ ಅಪರಾಧ... ಮೊದಲ ಬಾರಿ ಇಂಥ ಅಪರಾಧಕ್ಕಾಗಿ 2 ವರ್ಷ ಜೈಲು, 10 ಲಕ್ಷ ದಂಡ ರೂಪಾಯಿ, ಎರಡನೇ ಬಾರಿ ಇಂಥ ತಪ್ಪಿಗೆ ಐದು ವರ್ಷ ಜೈಲು, 50 ಲಕ್ಷ ದಂಡ ವಿಧಿಸಲಾಗುವುದು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ