ಮುರುಗದಾಸ್ ಜೀ ಗ್ರೀನ್ ಪಾರ್ಕ್ ಹೋಟೆಲ್ ನಿಮಗೆ ನೆನಪಿದೆಯಾ? –ಶ್ರೀರೆಡ್ಡಿ ಸಿಡಿಸಿದಳು ಮತ್ತೊಂದು ಬಾಂಬ್

ಶುಕ್ರವಾರ, 13 ಜುಲೈ 2018 (07:10 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಟಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ ತೆಲುಗು ನಟಿ ಶ್ರೀರೆಡ್ಡಿ ಅವರು ತಮ್ಮನ್ನು ಲೈಂಗಿಕವಾಗಿ  ದುರುಪಯೋಗಪಡಿಸಿಕೊಂಡಿರುವ ಹಲವಾರು ಟಾಲಿವುಡ್ ನಟರ ಹೆಸರನ್ನು ಬಹಿರಂಗಪಡಿಸಿದ್ದರು. ಆದರೆ ಇದೀಗ ಜನಪ್ರಿಯ ತಮಿಳು ನಿರ್ದೇಶಕರೊಬ್ಬರ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.



 



ನಿರ್ದೇಶಕ ಹೆಸರನ್ನು ನಾನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದೇನೆ, ಫೋಟೋ ಸಾಕ್ಷಿಗಳೊಂದಿಗೆ ಬಹಿರಂಗ ಪಡಿಸುತ್ತೇನೆ ಎಂದಿದ್ದ ನಟಿ ಶ್ರೀರೆಡ್ಡಿ ಅವರು ಈಗ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮುರುಗದಾಸ್ ಕೂಡ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.


ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಶ್ರೀರೆಡ್ಡಿ ಅವರು ನೇರವಾಗಿ ಹೇಳದೆ, ಪರೋಕ್ಷವಾಗಿ ಮುರುಗದಾಸ್ ಮೇಲೆ ಬಾಂಬ್ ಸಿಡಿಸಿದ್ದಾರೆ. '' ಹಾಯ್ ತಮಿಳು ಡೈರೆಕ್ಟರ್ ಮುರುಗದಾಸ್ ಜೀ....ಹೇಗಿದ್ದೀರಾ.? ಗ್ರೀನ್ ಪಾರ್ಕ್ ಹೋಟೆಲ್ ನಿಮಗೆ ನೆನಪಿದೆಯಾ.?'' ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾತು ಮುಂದುವರೆಸಿರುವ ಶ್ರೀರೆಡ್ಡಿ ''ವೇಲಗೊಂಡ ಶ್ರೀನಿವಾಸ್ ಅವರ ಮುಖಾಂತರ ನಾವು ಭೇಟಿ ಮಾಡಿದ್ದೇವು. ನೀವು ನನಗೆ ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ಆದ್ರೆ, ನಮ್ಮಿಬ್ಬರ ಮಧ್ಯೆ ಜಾಸ್ತಿ.........ಇದುವರೆಗೂ ನೀವು ನನಗೆ ಯಾವುದೇ ಆಫರ್ ಮಾಡಲಿಲ್ಲ.'' ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ