ಅದೇ ರೀತಿಯ ರೆಗ್ಯುಲರ್ ಚಿತ್ರಗಳಿಗಿಂತ ಇದುವರೆಗೂ ಅಭಿನಯಿಸದ, ಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸಬೇಕೆಂದಿದ್ದೇನೆ ಎನ್ನುತ್ತಾರೆ ಸೋನಾಕ್ಷಿ ಸಿನ್ಹಾ. "ಯಾವುದೇ ಪಾತ್ರ ಮಾಡುವ ಮುನ್ನ ಅದು ಸವಾಲಾಗಿದೆಯಾ ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಆ ಪಾತ್ರ ಚಾಲೆಂಜಿಂಗ್ ಆಗಿದೆ ಅನ್ನಿಸಿದರೆ ಅಭಿನಯಿಸುತ್ತೇನೆ. ಇದುವರೆಗೂ ಅಭಿನಯಿಸದೆ ಇರುವ ಪಾತ್ರದಲ್ಲಿ ಜೀವಿಸಬೇಕೆಂದಿದ್ದೇನೆ" ಎಂದಿದ್ದಾರೆ.