ತುಷಾರ್ ಕಪೂರ್ ಅವರು ತಂದೆಯಾಗಿದ್ದಾರೆ ಅಂತಾ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರ ತಲೆಯಲ್ಲಿ ಮೊದಲು ಬಂದ ಪ್ರಶ್ನೆ ಅಂದ್ರೆ ತುಷಾರ್ ಕಪೂರ್ ಅವರು ಯಾವಾಗ ವಿವಾಹವಾಗಿದ್ದರು ಅಂತಾ. ಆದ್ರೆ ತುಷಾರ್ ಮಗುವನ್ನು ಪಡೆದಿರೋದು ಐವಿಎಫ್ ಚಿಕಿತ್ಸೆಯ ಮೂಲಕ. ಅಂದ್ಹಾಗೆ ಈ ಮಗುವಿಗೆ ತುಷಾರ್ ಕಪೂರ್ ಅವರು ಲಕ್ಷ್ಯ ಅಂತಾ ಹೆಸರಿಟ್ಟಿದ್ದಾರೆ. ಇನ್ನು ಮನೆಗೆ ಮುದ್ದಾದ ಮಗು ಬಂದಿರೋದರಿಂದ ತುಷಾರ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆಯಂತೆ.ಅಲ್ಲದೇ ಮಗು ಆರೋಗ್ಯವಾಗಿದೆ ಅಂತಾ ತುಷಾರ್ ಹೇಳಿದ್ದಾರೆ.
ಇನ್ನು ತಂದೆಯಾದ ಬಳಿಕ ನನ್ನಲ್ಲಿ ಜವಾಬ್ದಾರಿ ಹೆಚ್ಚಾಗಿದೆ. ಅದರಲ್ಲೂ ನನ್ನ ಮಗುವಿನ ಮುದ್ದು ಮುಖ ನೋಡಿದಾಗ ನನ್ನ ಸಂಭ್ರಮ ಇನ್ನಷ್ಟು ಹೆಚ್ಚಾಗುತ್ತೆ ಅಂತಾ ಅವರು ಹೇಳಿದ್ದಾರೆ. ಅಲ್ಲದೇ ಲಕ್ಷ್ಯ ನನ್ನ ಜೀವನದ ಅತ್ಯಂತ ಸಂತೋಷದ ಮೂಲ ಅಂತಾ ತುಷಾರ್ ಹೇಳಿದ್ದಾರೆ.ಆದ್ರೆ ತುಷಾರ್ ಅವರು ಐವಿಎಫ್ ಚಿಕಿತ್ಸೆ ಮೂಲಕ ಹೀಗೆ ಮಗುವನ್ನು ಯಾಕೆ ಪಡೆದ್ರು ಅನ್ನೋದು ಮಾತ್ರ ಹಲವರ ತಲೆಯಲ್ಲಿ ಕೊರೆಯುತ್ತಿದೆ.