ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಚಾರವಾಗಿ ಎನ್ ಸಿಬಿ ಅಧಿಕಾರಿಗಳು ಮನ್ನತ್ ನಲ್ಲಿ ತಪಾಸಣೆ ನಡೆಸಿದ್ದಾರೆ.
ಮುಂಬೈನ ಶಾರುಖ್ ನಿವಾಸ ಮನ್ನತ್ಗೆ ಬಂದ ಅಧಿಕಾರಿಗಳು ಕೆಲವು ಹೊತ್ತು ತಪಾಸಣೆ ನಡೆಸಿ ವಾಪಸಾಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಇದು ದಾಳಿಯಲ್ಲ ಎಂದಿದ್ದಾರೆ.
ಆರ್ಯನ್ ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ತೆಗೆದುಕೊಳ್ಳಲು ಎನ್ ಸಿಬಿ ಅಧಿಕಾರಿಗಳು ಮನ್ನತ್ ಗೆ ಭೇಟಿ ಕೊಟ್ಟಿದ್ದಾರೆ. ಬದಲಾಗಿ ಇದು ದಾಳಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.