ತಮ್ಮನ ಬರ್ತಡೇಗೆ ಭರ್ಜರಿ ಗಿಫ್ಟ್ ತಯಾರಿಸುತ್ತಿದ್ದಾರೆ ಅನೂಪ್

ಸೋಮವಾರ, 8 ಆಗಸ್ಟ್ 2016 (09:14 IST)
ರಾಜಪಥ ಸಿನಿಮಾದ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಮಧ್ಯೆಯೇ ಇದೇ 13 ರಂದು ಸಿನಿಮಾದ ಹೀರೋ ನಿರೂಪ್ ಭಂಡಾರಿ ಅವರ ಹುಟ್ಟುಹಬ್ಬವಿದೆ. ತಮ್ಮನಿಗಾಗಿ ಸಿನಿಮಾನೇ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ ಅವರು ಇನ್ನು ಬರ್ತಡೇಗೆ ತನ್ನ ತಮ್ಮನಿಗೆ ಏನಾದರೂ ಗಿಫ್ಟ್ ಕೊಡದೇ ಇರುತ್ತಾರಾ ಹೇಳಿ. ತಮ್ಮ ಬರ್ತಡೇಗಾಗಿ ಅಣ್ಣ ಭರ್ಜರಿ ಉಡುಗೊರೆಯನ್ನೇ ರೆಡಿ ಮಾಡಿಕೊಂಡಿದ್ದಾರೆ.ಅದು ಏನಪ್ಪಾ ಅಂದರೆ ರಾಜಪಥ ಸಿನಿಮಾದ ಟೀಸರ್.


ರಂಗಿತರಂಗ ಸಿನಿಮಾದ ನಿರ್ದೇಶಕ ಅನಪ್ ಭಂಡಾರಿ ಅವರು ಮತ್ತೊಂದು ಸಿನಿಮಾ ಮಾಡುತ್ತಾರೆ ಅಂತಾ ಹೇಳಿಕೊಂಡಾಗಲೇ ಆ ಸಿನಿಮಾವನ್ನು ಯಾವಾಗ ನೋಡುತ್ತೇವೋ ಸಿನಿಮಾದ ಟ್ರೈಲರ್ ಯಾವಾಗ ರಿಲೀಸ್ ಆಗುತ್ತೋ ಅಂತಾ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಹೀಗುರುವಾಗಲೇ ರಂಗಿತರಂಗ ಸಿನಿಮಾ ತಂಡದ ಎರಡನೇ ಸಿನಿಮಾ  ರಾಜಪಥದ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ.

ಸದ್ಯ ರಾಜಪಥ ಸಿನಿಮಾದ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಮಧ್ಯೆಯೇ ಇದೇ 13 ರಂದು ಸಿನಿಮಾದ ಹೀರೋ ನಿರೂಪ್ ಭಂಡಾರಿ ಅವರ ಹುಟ್ಟುಹಬ್ಬವಿದೆ. ತಮ್ಮನಿಗಾಗಿ ಸಿನಿಮಾನೇ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ ಅವರು ಇನ್ನು ಬರ್ತಡೇಗೆ ತನ್ನ ತಮ್ಮನಿಗೆ ಏನಾದರೂ ಗಿಫ್ಟ್ ಕೊಡದೇ ಇರುತ್ತಾರಾ ಹೇಳಿ. ತಮ್ಮ ಬರ್ತಡೇಗಾಗಿ ಅಣ್ಣ ಭರ್ಜರಿ ಉಡುಗೊರೆಯನ್ನೇ ರೆಡಿ ಮಾಡಿಕೊಂಡಿದ್ದಾರೆ.ಅದು ಏನಪ್ಪಾ ಅಂದರೆ ರಾಜಪಥ ಸಿನಿಮಾದ ಟೀಸರ್.

ನಿರೂಪ್ ಬರ್ತಡೇ ಗೆ ರಾಜರಥ' ಚಿತ್ರದ ಮೊದಲ ಟೀಸರ್ ಗಿಫ್ಟ್ ಆಗಿ ಕೊಡಬೇಕು ಎಂದು ಅನೂಪ್ ತೀರ್ಮಾನಿಸಿದ್ದಾರೆ. ಅದರಂತೆ, ಮೊದಲ ಹಂತದ ಚಿತ್ರೀಕರಣದಲ್ಲಿ ಶೂಟ್ ಆದ ಹಲವು ದೃಶ್ಯಗಳನ್ನಿಟ್ಟುಕೊಂಡು, ಅವರೀಗ ಟೀಸರ್ ಮಾಡುತ್ತಿದ್ದಾರೆ. ಆ ಟೀಸರ್ ಇದೇ 13ರಂದು ನಿರೂಪ್ ಅವರ ಬರ್ಥ್‍ಡೇ ಗಿಫ್ಟ್ ಆಗಿ ಬಿಡುಗಡೆಯಾಗಲಿದೆ.

ರಾಜರಥ' ಚಿತ್ರವನ್ನು ಅನೂಪ್ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ನಿರ್ದೇಶನದ ಜತೆಯಲ್ಲಿ ಅನೂಪ್ ಭಂಡಾರಿ ಅವರೇ ಇಲ್ಲೂ ಸಹ ಸಂಗೀತ ಹಾಗೂ ಸಾಹಿತ್ಯದ ಜವಾಬ್ದಾರಿ ಹೊತ್ತಿದ್ದಾರೆ. ಅನೂಪ್‍ಗೆ ನಾಯಕಿಯಾಗಿ `ರಂಗಿತರಂಗ' ಚಿತ್ರದಲ್ಲಿ ನಾಯಕಿಯಾಗಿದ್ದ ಆವಂತಿಕಾ ಶೆಟ್ಟಿ ಇಲ್ಲೂ ಕೂಡ ನಾಯಕಿಯಾಗಿ  ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ