ಪ್ರಿಯಾಂಕ ಚೋಪ್ರಾ ಈ ನಡವಳಿಕೆ ಹಲವರಲ್ಲಿ ಗೊಂದಲ ಉಂಟುಮಾಡಿದೆಯಂತೆ!

ಸೋಮವಾರ, 30 ಜುಲೈ 2018 (12:42 IST)
ಮುಂಬೈ : ನಟಿ ಪ್ರಿಯಾಂಕ ಚೋಪ್ರಾ ಅವರು  ನಟ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ‘ಭಾರತ್’ ಚಿತ್ರತಂಡದಿಂದ ಈಗಾಗಲೇ ಹೊರಬಂದಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಆದರೆ ಈ ನಡುವೆ ಇದೀಗ ಪ್ರಿಯಾಂಕ ಅವರ ಕುರಿತು ಶಾಂಕಿಂಗ್ ವಿಚಾರವೊಂದು ಹೊಬಿದ್ದಿದೆ.


ನಟಿ ಪ್ರಿಯಾಂಕ ಅವರು ನಟ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ‘ಭಾರತ್’ ಚಿತ್ರದಲ್ಲಿ ನಟಿಸುವುದಾಗಿ ಒಪ್ಪಿಕೊಂಡು ಇದೀಗ ನಿಕ್ ಜೊತೆ ಮದುವೆಯಾಗಲಿರುವ ಕಾರಣದಿಂದ ಆ ಚಿತ್ರತಂಡದಿಂದ ಹೊರನಡೆದಿದ್ದಾರೆ. ಈ ವಿಚಾರವನ್ನು ‘ಭಾರತ್’ ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಖಚಿತಪಡಿಸಿದ್ದಾರೆ.


ಆದರೆ ಇದೀಗ ಬಂದ ಹೊಸ ವಿಚಾರವೆನೆಂದರೆ ನಟಿ ಪ್ರಿಯಾಂಕ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರಂತೆ. ಅವರು  ಫರ್ಹಾನ್ ಅಕ್ತರ್ ಚಿತ್ರ ‘ದಿ ಸ್ಕೈ ಈಸ್ ಪಿಂಕ್’ ಚಿತ್ರದಲ್ಲಿ ನಟಿಸಲಿದ್ದಾರಂತೆ. ಆಗಸ್ಟ್ 9 ರಿಂದ ಈ ಚಿತ್ರದ ಶೂಟಿಂಗ್ ಶುರುವಾಗಲಿದೆಯಂತೆ.
ಹಾಗಾದರೆ ಮದುವೆಯ ವಿಚಾರಕ್ಕೆ ಭಾರತ್ ಚಿತ್ರವನ್ನು ಕೈಬಿಟ್ಟ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿರುವುದಾದರೂ ಯಾಕೆ ಎಂಬ ಪ್ರಶ್ನೆ ಈಗ ಎಲ್ಲಾ ಕಡೆ ಕೇಳಿ ಬರುತ್ತಿದೆ. ಹಾಗೇ ಪ್ರಿಯಾಂಕ ನಟ ಸಲ್ಮಾನ್ ಖಾನ್ ಜೊತೆ ಏನಾದರೂ ಕಿರಿಕ್ ಮಾಡಿಕೊಂಡ್ರಾ ಎಂಬ ಗೊಂದಲ ಕೂಡ ಹಲವರಲ್ಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ