ನಟಿ ರಾಧಿಕಾ ಶರತ್ ಕುಮಾರ್ ಗೆ ಬ್ಲಡ್ ಕ್ಯಾನ್ಸರಾ? ಈ ಬಗ್ಗೆ ರಾಧಿಕಾರವರು ಹೇಳಿದ್ದೇನು ಗೊತ್ತಾ?
ಶನಿವಾರ, 26 ಮೇ 2018 (15:12 IST)
ಚೆನ್ನೈ : ತೆಲುಗು, ತಮಿಳಿನ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬಂದಿದ್ದು, ಈ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಇದೀಗ ಸ್ವತಃ ರಾಧಿಕಾ ಅವರೇ ಉತ್ತರ ನೀಡಿದ್ದಾರೆ.
‘ನಟಿ ರಾಧಿಕಾ ಶರತ್ ಕುಮಾರ್ ಅವರು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ., ಅಯ್ಯೋ ರಾಧಿಕಾಗೆ ಈ ರೀತಿ ಆಗಬಾರದಿತ್ತು’ ಎಂದು ಹಲವಾರು ವೆಬ್ ಸೈಟ್ ಗಳು ಬರೆದಿದ್ದವು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲೂ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಈ ಸುದ್ದಿ ಕೇಳಿ ಶಾಕ್ ಆದ ಅವರ ಅಭಿಮಾನಿಯೊಬ್ಬರು ರಾಧಿಕಾರನ್ನು ಟ್ಯಾಗ್ ಮಾಡಿ ಟ್ವಿಟರ್ ನಲ್ಲಿ ‘ಏನು ಮೇಡಂ ಈ ಸುದ್ದಿ ನಿಜವೇ’ ಎಂದು ಕೇಳಿದ. ಇದಕ್ಕೆ ಪ್ರತಿಕ್ರಿಯಿಸಿರುವ ರಾಧಿಕಾ, "ಇದು ನಿಜ ಅಲ್ಲ, ಕಾಲ್ಪನಿಕ" ಎಂದು ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ